ADVERTISEMENT

ಮೈಸೂರು: ನಬಾರ್ಡ್‌ ಪರೀಕ್ಷೆಯಲ್ಲಿ ರಘುನಂದನ ತೇರ್ಗಡೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 3:10 IST
Last Updated 4 ಜೂನ್ 2024, 3:10 IST
ಕೆ.ಎಸ್‌. ರಘುನಂದನ
ಕೆ.ಎಸ್‌. ರಘುನಂದನ   

ಮೈಸೂರು: ನವೋದಯ ಫೌಂಡೇಷನ್‌ ನಡೆಸುತ್ತಿರುವ ‘ನವೋ ಪ್ರಮತಿ ಸ್ಪರ್ಧಾತ್ಮಕ ಕೇಂದ್ರ’ದಲ್ಲಿ ತರಬೇತಿ ಪಡೆದ ಕೆ.ಎಸ್. ರಘುನಂದನ ನಬಾರ್ಡ್ (ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್) – ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ (200 ಅಂಕಗಳಿಗೆ 184.5 ಅಂಕ) ಪ್ರಥಮ ರ‍್ಯಾಂಕ್‌ ಗಳಿಸಿ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಇವರು ಇಲ್ಲಿನ ಶಕ್ತಿನಗರದ ನಿವಾಸಿ ಎಲ್‌ಐಸಿ ನಿವೃತ್ತ ಆಡಳಿತಾಧಿಕಾರಿ ಡಿ.ಶ್ರೀನಿವಾಸ್‌ ಪುತ್ರ. ಇವರು ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಆ ಪರೀಕ್ಷೆಗೆ ತಯಾರಿ ಮುಂದುವರಿಸಿದ್ದಾರೆ. ಅವರನ್ನು ನವೋ ಪ್ರಮತಿ ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷ ರವಿ ಡಿ. ಚನ್ನಣ್ಣವರ್‌, ಕಾರ್ಯಕಾರಿ ಸಮಿತಿಯ ಎಚ್‌.ವಿ.ರಾಜೀವ್‌, ಎಸ್‌.ಫಣಿರಾಜ್‌, ಎಸ್‌.ಆರ್‌.ರವಿ, ಸಂದೀಪ್‌ ಮಹಾಜನ್‌ ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT