ADVERTISEMENT

ಮುಂದುವರಿದ ವರ್ಷಧಾರೆ; ಮಲೆನಾಡಾದ ಮೈಸೂರು

​ಪ್ರಜಾವಾಣಿ ವಾರ್ತೆ
Published 19 ಮೇ 2024, 14:26 IST
Last Updated 19 ಮೇ 2024, 14:26 IST
ನಗರದ ಎಸ್. ನಿಜಲಿಂಗಪ್ಪ ವೃತ್ತದಲ್ಲಿ ಭಾನುವಾರ ಮಳೆಯ ನಡುವೆ ಸಾಗಿದ ವಾಹನ ಸವಾರರು –ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ನಗರದ ಎಸ್. ನಿಜಲಿಂಗಪ್ಪ ವೃತ್ತದಲ್ಲಿ ಭಾನುವಾರ ಮಳೆಯ ನಡುವೆ ಸಾಗಿದ ವಾಹನ ಸವಾರರು –ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.   

ಮೈಸೂರು: ನಗರ ಹಾಗೂ ಸುತ್ತಮುತ್ತ ಭಾನುವಾರ ಆಗಾಗ್ಗೆ ಮಳೆಯಾಗಿದ್ದು, ಮಲೆನಾಡನ್ನು ನೆನಪಿಸುವಂತೆ ಇತ್ತು.

ಕೆಲವಡೆ ಮುಂಜಾನೆ 6ಕ್ಕೆ ಮಳೆ ಆರಂಭಗೊಂಡು ಒಂದು ಗಂಟೆ ಕಾಲ ಅಬ್ಬರಿಸಿದರೆ, ಮತ್ತೆ ಕೆಲವೆಡೆ ಬೆಳಿಗ್ಗೆ 9ಕ್ಕೆ ಆರಂಭಗೊಂಡು 11ರವರೆಗೂ ಹನಿಯಿತು. ಮಧ್ಯಾಹ್ನ ಒಂದಿಷ್ಟು ಹೊತ್ತು ಬಿಸಿಲು ಬಂತಾದರೂ ಸಂಜೆ 4ರ ಬಳಿಕ ಮತ್ತೆ ಕಪ್ಪನೆಯ ಮೋಡಗಳು ಕವಿದು ಆಗಾಗ್ಗೆ ವರ್ಷಧಾರೆ ಆಗುತ್ತಲೇ ಹೋಯಿತು. ಗುಡುಗು–ಸಿಡಿಲಿನ ಅಬ್ಬರವಿಲ್ಲದೆಯೇ ಸುರಿಯುತ್ತಿದ್ದ ಮಳೆಯಲ್ಲಿ ಜನ ಅತ್ತಿಂದಿತ್ತ ಓಡಾಡಲು ಪ್ರಯಾಸ ಪಟ್ಟರು. ರಜೆಯ ಮೋಜು ಸವಿಯಲು ಹೊರಗೆ ಹೋಗುವ ಯೋಜನೆ ಮಾಡಿಕೊಂಡಿದ್ದವರು ಮನೆಯಲ್ಲೇ ಬೆಚ್ಚಗೆ ಕುಳಿತು ಮಳೆ ಆಸ್ವಾದಿಸಿದರು.

ಮೈಸೂರಿನಲ್ಲಿ ಭಾನುವಾರ ಸುರಿದ ಮಳೆಯಲ್ಲಿ ಕೊಡೆ ಹಿಡಿದು ನಡೆದ ತರುಣಿಯರು –ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.

ಉಷ್ಣಾಂಶ ಇಳಿಕೆ: ಕಳೆದೊಂದು ವಾರದಿಂದ ನಿರಂತರ ಮಳೆಯಿಂದಾಗಿ ಪರಿಸರದಲ್ಲಿನ ತಾಪಮಾನದ ಪ್ರಮಾಣವು ತೀವ್ರ ಇಳಿಕೆ ಆಗಿದೆ. ಎರಡು ವಾರದ ಹಿಂದಷ್ಟೇ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಿಸಿ ಬಿಸಿಲ ನಗರಿಯಾಗಿದ್ದ ಮೈಸೂರಿನಲ್ಲಿ ಭಾನುವಾರ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗಿತ್ತು. ಬುಧವಾರದವರೆಗೂ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.

ADVERTISEMENT
ನಗರದ ಎಸ್. ನಿಜಲಿಂಗಪ್ಪ ವೃತ್ತದಲ್ಲಿ ಭಾನುವಾರ ಮಳೆಯ ನಡುವೆ ಸಾಗಿದ ವಾಹನ ಸವಾರರು –ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.