ADVERTISEMENT

ಮೈಸೂರು: ಅಕಾಲಿಕ ಮಳೆ, ಭತ್ತದ ಕೊಯ್ಲಿಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 14:34 IST
Last Updated 4 ಜನವರಿ 2024, 14:34 IST
ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿ ಗುರುವಾರ ಸುರಿದ ಮಳೆಯಲ್ಲಿ ವಾಹನಗಳು ಸಾಗಿದವು –ಪ್ರಜಾವಾಣಿ ಚಿತ್ರ
ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿ ಗುರುವಾರ ಸುರಿದ ಮಳೆಯಲ್ಲಿ ವಾಹನಗಳು ಸಾಗಿದವು –ಪ್ರಜಾವಾಣಿ ಚಿತ್ರ   

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಮಳೆ ಬಿದ್ದಿತು. ಹಲವೆಡೆ ತುಂತುರು, ಜಿಟಿಜಿಟಿ ಹಾಗೂ ಕೆಲವೆಡೆ ಸಾಧಾರಣ ಮಳೆಯಾಯಿತು.

ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಶೀತ ಗಾಳಿ ಬೀಸುತ್ತಿತ್ತು. ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರ, ನಗುವನಹಳ್ಳಿ ಭಾಗದಲ್ಲಿ ತಾಸಿಗೂ ಹೆಚ್ಚು ಕಾಲ ಜೋರು ಮಳೆ ಬಿತ್ತು. ರಕ್ಷಣೆ ಪಡೆಯಲು ಬಹಳಷ್ಟು ದ್ವಿಚಕ್ರವಾಹನ ಸವಾರರು ನಗುವನಹಳ್ಳಿ ಗೇಟ್ ಅಂಡರ್‌ಪಾಸ್‌ನಲ್ಲಿ ನಿಂತಿದ್ದರು.

ಪಿರಿಯಾಪಟ್ಟಣ, ನಂಜನಗೂಡು ತಾಲ್ಲೂಕಿನಲ್ಲಿ ಬೆಳಿಗ್ಗೆಯಿಂದ ಆಗಾಗ ತುಂತುರು ಮಳೆ ಬಿತ್ತು. ಧರ್ಮಪುರದಲ್ಲೂ ಇದೇ ಸ್ಥಿತಿ ಇತ್ತು.

ADVERTISEMENT

ಮೈಸೂರು, ನಂಜನಗೂಡು, ತಿ.ನರಸೀಪುರ ತಾಲ್ಲೂಕುಗಳಲ್ಲಿ ಭತ್ತದ ಕೊಯ್ಲಿಗೆ ಅಡ್ಡಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.