ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯ ಹಿನ್ನೀರಿನ ಪ್ರದೇಶದ ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ 800 ಕ್ಯುಸೆಕ್ ನೀರು ಬರುತ್ತಿದೆ.
ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಾಗಿದ್ದು, ಬಿರು ಬಿಸಿಲಿಗೆ ಹಾಗೂ ಮಳೆ ಇಲ್ಲದ್ದರಿಂದ ಜಲಾಶಯದ ಮಟ್ಟ 2256.37 ಅಡಿಗೆ ಇಳಿದಿದ್ದು, ಜಲಾಶಯದ ಒಳ ಹರಿವು ಕೇವಲ 42 ಕ್ಯುಸೆಕ್ ಇತ್ತು. ಭಾಕಳೆದ ಮೂರು ದಿನ ಮಳೆ ಆಗಿದ್ದರಿಂದ ಮಂಗಳವಾರ ಸಂಜೆ ವೇಳೆಗೆ ಜಲಾಶಯದ ಒಳ ಹರಿವು 800 ಕ್ಯುಸೆಕ್‌ಗೆ ಏರಿದ್ದು, ಜಲಾಶಯದ ಮಟ್ಟ 2257 ಅಡಿಗೆ ಏರಿದೆ. ಕಳೆದ ವರ್ಷ 2252.39 ಅಡಿ ನೀರಿದ್ದು, ಜಲಾಶಯದ ಒಳ ಹರಿವು ಕೇವಲ 50 ಕ್ಯುಸೆಕ್ ಇತ್ತು.
ವಾಯುಭಾರ ಕುಸಿತದಿಂದ ಜಲಾಶಯ ವ್ಯಾಪ್ತಿಯ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಮಾನಂದವಾಡಿ ಮತ್ತು ಸುಲ್ತಾನ್ ಬತ್ತೇರಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಳೆದ ಎರಡೂ ದಿನಗಳಿಂದ ಮಳೆ ಆಗುತ್ತಿದ್ದು, ಜಲಾಶಯಕ್ಕೆ ಮತ್ತಷ್ಟೂ ಒಳ ಹರಿವು ಬರುವ ಸಾಧ್ಯತೆ ಇದೆ. ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರಾರಂಭ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.