ADVERTISEMENT

Mysuru Zoo- ಮೈಸೂರು ಮೃಗಾಲಯ: 3 ದಿನದಲ್ಲಿ 1.01 ಲಕ್ಷ ಪ್ರವಾಸಿಗರ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 15:46 IST
Last Updated 25 ಡಿಸೆಂಬರ್ 2023, 15:46 IST
<div class="paragraphs"><p>ಮೈಸೂರು ಮೃಗಾಲಯ ಆವರಣದಲ್ಲಿ ಸೋಮವಾರ ಕಂಡುಬಂದ ಪ್ರವಾಸಿಗರು</p></div>

ಮೈಸೂರು ಮೃಗಾಲಯ ಆವರಣದಲ್ಲಿ ಸೋಮವಾರ ಕಂಡುಬಂದ ಪ್ರವಾಸಿಗರು

   

– ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.

ಮೈಸೂರು: ಸಾಲು ರಜೆಯ ಕಾರಣದಿಂದಾಗಿ ಇಲ್ಲಿನ ಚಾಮರಾಜೇಂದ್ರ ಮೃಗಾಲಯಕ್ಕೆ ಶನಿವಾರದಿಂದ ಸೋಮವಾರದವರೆಗೆ ದಾಖಲೆ ಸಂಖ್ಯೆಯಲ್ಲಿ ಅಂದರೆ 1.01 ಲಕ್ಷ ಸಂದರ್ಶಕರು ಭೇಟಿ ನೀಡಿದ್ದಾರೆ. ಹೋದ ವರ್ಷ ಇದೇ ದಿನಗಳಲ್ಲಿ ಒಟ್ಟು 77,833 ಮಂದಿ ಬಂದಿದ್ದರು.

ADVERTISEMENT

ಕ್ರಿಸ್‌ಮಸ್‌ ದಿನವಾದ ಸೋಮವಾರ 35,344 ವೀಕ್ಷಕರು ಭೇಟಿ ನೀಡಿದ್ದರು. ಭಾನುವಾರ (ಡಿ.24) ದಾಖಲೆಯ 40,761 ಮಂದಿ ಬಂದಿದ್ದರು. 2018ರ ಡಿ.24ರಂದು 40,675 ಸಂದರ್ಶಕರು ಭೇಟಿ ನೀಡಿದ್ದರು ಎಂದು ಮೃಗಾಲಯದ ಪ್ರಕಟಣೆ ತಿಳಿಸಿದೆ.

ಸಂದರ್ಶಕರ ಭೇಟಿ ಅಂಕಿ–ಅಂಶ

ದಿನಾಂಕ20222023
ಡಿ.2316,68225,860
ಡಿ.2426,35540,761
ಡಿ.2534,79635,344
ಒಟ್ಟು77,8331,01,96

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.