ADVERTISEMENT

ರಸ್ತೆ ಓಟದ ಸ್ಪರ್ಧೆ: ಸಿಂಧು, ಶಶಾಂಕ್ ಪ್ರಥಮ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 12:45 IST
Last Updated 20 ಮಾರ್ಚ್ 2023, 12:45 IST
ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ ‘ಆತ್ಮೀಯ-2023’ ಅಂಗವಾಗಿ ಭಾನುವಾರ ಆಯೋಜಿಸಿದ್ದ ರಸ್ತೆ ಓಟದ ಸ್ಪರ್ಧೆಗೆ ಮೇಯರ್ ಶಿವಕುಮಾರ್ ಚಾಲನೆ ನೀಡಿದರು
ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ ‘ಆತ್ಮೀಯ-2023’ ಅಂಗವಾಗಿ ಭಾನುವಾರ ಆಯೋಜಿಸಿದ್ದ ರಸ್ತೆ ಓಟದ ಸ್ಪರ್ಧೆಗೆ ಮೇಯರ್ ಶಿವಕುಮಾರ್ ಚಾಲನೆ ನೀಡಿದರು   

ಮೈಸೂರು: ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ ‘ಆತ್ಮೀಯ-2023’ ಅಂಗವಾಗಿ ರಸ್ತೆ ಓಟದ ಸ್ಪರ್ಧೆಯನ್ನು ಭಾನುವಾರ ಆಯೋಜಿಸಲಾಗಿತ್ತು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮೇಯರ್ ಶಿವಕುಮಾರ್‌ ಕಾಲೇಜಿನ ಆಡಳಿತ ಮಂಡಳಿ ಸದಸ್ಯರೊಂದಿಗೆ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ನಾಗರಹೊಳೆ ವಲಯದ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎನ್.ದೇವರಾಜು ಮಾತನಾಡಿ, ‘ವನ್ಯಜೀವಿ ಮತ್ತು ಮಾನವನ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಪ್ರಕೃತಿ ಮತ್ತು ಜೀವಸಂಕುಲಗಳ ನಡುವೆ ಸಮನ್ವಯ ಸಾಧಿಸಬೇಕು. ಇಲ್ಲದಿದ್ದರೆ ಇದು ಮುಂದೆ ಪ್ರಕೃತಿ ಹಾಗೂ ಮಾನವನ ವಿನಾಶಕ್ಕೆ ಕಾರಣವಾಗಬಹುದು’ ಎಂದು ತಿಳಿಸಿದರು.

ADVERTISEMENT

600 ವಿದ್ಯಾರ್ಥಿಗಳು ಓಟದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿಯರ ವಿಭಾಗದಲ್ಲಿ ಸಿಂಧು ಟಿ.ಸಿ. (ಇ ಅಂಡ್‌ ಸಿ ವಿಭಾಗ) ಪ್ರಥಮ, ತಾನಿಯಾ (ಸಿ.ಎಸ್ ವಿಭಾಗ.) ದ್ವಿತೀಯ, ಚೈತ್ರಾ (ಡೇಟಾ ಸೈನ್ಸ್ ವಿಭಾಗ) ತೃತೀಯ, ವಿದ್ಯಾರ್ಥಿಗಳ ವಿಭಾಗದಲ್ಲಿ ಶಶಾಂಕ್ (ಇಇಇ ವಿಭಾಗ) ಪ್ರಥಮ, ರೇವಂತ್ (ಎಐಎಂಎಲ್ ವಿಭಾಗ) ದ್ವಿತೀಯ ಹಾಗೂ ಎಂ.ಸಿಂಗ್‌ (ಸಿ.ಎಸ್ ವಿಭಾಗ) ತೃತಿಯ ಸ್ಥಾನ ಪಡೆದರು.

ಅಧ್ಯಾಪಕರ ವಿಭಾಗದಲ್ಲಿ ನಂದಿನಿ ಜಿ.ಎಸ್. (ಪ್ರಥಮ), ಕೀರ್ತಿ ಎ.ಕುಂಬಾರ್ ದ್ವಿತೀಯ ಸ್ಥಾನ ಗಳಿಸಿದರು. ಸಿಬ್ಬಂದಿ ವಿಭಾಗದಲ್ಲಿ ಮನುಕುಮಾರ್ ಕೆ. (ಪ್ರಥಮ), ಶಿವಕುಮಾರ (ದ್ವಿತೀಯ) ಮತ್ತು ನಾರಾಯಣಸ್ವಾಮಿ ತೃತಿಯ ಬಹುಮಾನ ಗೆದ್ದರು. ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಶಿವಶಂಕರ್, ಖಜಾಂಚಿ ಆರ್.ವೀರೇಶ್, ಆಡಳಿತ ಮಂಡಳಿ ಸದಸ್ಯ ವೆಂಕಟೇಶ್ ಎಚ್., ಆಡಳಿತಾಧಿಕಾರಿ ಡಾ.ಸಚ್ಚಿದಾನಂದಮೂರ್ತಿ, ಪ್ರಾಂಶುಪಾಲ ಡಾ.ಎಲ್.ಬಸವರಾಜ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಡಾ.ಯತೀಶ ಎಲ್. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.