ADVERTISEMENT

ಸಾ.ರಾ.ಚೌಲ್ಟ್ರಿ; ಸಮಗ್ರ ತನಿಖೆಗೆ ರೋಹಿಣಿ ಸಿಂಧೂರಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 14:49 IST
Last Updated 10 ಜೂನ್ 2021, 14:49 IST
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ   

ಮೈಸೂರು: ಶಾಸಕ ಸಾ.ರಾ.ಮಹೇಶ್ ಅವರ ಸಾ.ರಾ.ಚೌಲ್ಟ್ರಿ ಕುರಿತು ಕೇವಲ ಒಂದೇ ಒಂದು ಅಂಶವನ್ನಿಟ್ಟುಕೊಂಡು ತನಿಖೆ ನಡೆಸುವುದು ಸೂಕ್ತವಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರಾದೇಶಿಕ ಆಯುಕ್ತರನ್ನು ಒತ್ತಾಯಿಸಿದ್ದಾರೆ.

ಸರ್ಕಾರಿ ಗೋಮಾಳದ ಭೂಮಿ ಹೇಗೆ ಖಾಸಗಿ ಸ್ವತ್ತಾಗುತ್ತದೆ ಎಂದು ಪ್ರಶ್ನಿಸಿರುವ ಅವರು, ಭೂಪರಿವರ್ತನೆಯಾಗಿರುವುದೇ ಸರಿಯಲ್ಲ. ಮಾಸ್ಟರ್‌ಪ್ಲಾನ್‌ಗೆ ವಿರುದ್ಧ ಕಟ್ಟಡ ನಿರ್ಮಿಸಲಾಗಿದೆ. ಆದರೆ, ತನಿಖೆಯು ಸಾ.ರಾ.ಮಹೇಶ್ ಅವರು ಹೇಳಿದಂತೆ ಕೇವಲ ಒಂದು ಅಂಶಕ್ಕೆ ಮಾತ್ರವೇ ಸೀಮಿತಗೊಂಡಿದೆ. ಇದಕ್ಕೆ ಬದಲಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಲಿಂಗಾಂಬುದಿ ಕೆರೆ ಸಮೀಪ ಇರುವ ಭೂಮಿಯ ಕುರಿತೂ ತನಿಖೆ ಕೈಗೊಳ್ಳಬೇಕು ಅವರು ಇದೇ ವೇಳೆ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.