ADVERTISEMENT

ಮೈಸೂರು: ರೋಟರಿ: ಕೊಕ್ಕೊ–ವಾಲಿಬಾಲ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 6:03 IST
Last Updated 9 ಫೆಬ್ರುವರಿ 2023, 6:03 IST
ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್‌ ಮೈದಾನದಲ್ಲಿ ಬುಧವಾರ ಆರಂಭವಾದ ‘ರೋಟರಿ ಐಡಿಯಲ್‌ ಜಾವಾ’ 35ನೇ ಕೊಕ್ಕೊ ಟೂರ್ನಿಯಲ್ಲಿ ಕಾವೇರಿ ಶಾಲೆ ಹಾಗೂ ಈಸ್ಟ್‌ವೆಸ್ಟ್‌ ಇಂಟರ್‌ನ್ಯಾಷನಲ್ ಶಾಲಾ ತಂಡಗಳ ಪೈಪೋಟಿಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್‌ ಮೈದಾನದಲ್ಲಿ ಬುಧವಾರ ಆರಂಭವಾದ ‘ರೋಟರಿ ಐಡಿಯಲ್‌ ಜಾವಾ’ 35ನೇ ಕೊಕ್ಕೊ ಟೂರ್ನಿಯಲ್ಲಿ ಕಾವೇರಿ ಶಾಲೆ ಹಾಗೂ ಈಸ್ಟ್‌ವೆಸ್ಟ್‌ ಇಂಟರ್‌ನ್ಯಾಷನಲ್ ಶಾಲಾ ತಂಡಗಳ ಪೈಪೋಟಿಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್‌ ಪೆವಿ ಲಿಯನ್‌ನಲ್ಲಿ ಬುಧವಾರ ಆರಂಭವಾದ ‘ರೋಟರಿ ಐಡಿಯಲ್‌ ಜಾವಾ’ 35ನೇ ಕೊಕ್ಕೊ–ವಾಲಿಬಾಲ್‌ ಟೂರ್ನಿಯಲ್ಲಿ ಸಿದ್ಧಾರ್ಥನಗರದ ಟೆರಿಶಿಯನ್‌ ಹಾಗೂ ಕುವೆಂಪುನಗರದ ಕಾವೇರಿ ಶಾಲೆಗಳು ಪಾರಮ್ಯ ಸಾಧಿಸಿದವು.

ಲೀಗ್‌ ಹಂತದ ಬಾಲಕರ ವಿಭಾಗದ ಕೊಕ್ಕೊ ಪಂದ್ಯಗಳಲ್ಲಿ ಟೆರಿಷಿಯನ್‌ ತಂಡದವರು 12–6 ಪಾಯಿಂಟ್‌ಗಳಿಂದ ಹರಿವಿದ್ಯಾಲಯ ತಂಡವನ್ನು ಮಣಿಸಿದರೆ, ವಿದ್ಯಾವರ್ಧಕ ಶಾಲಾ ತಂಡದವರು 11–3ರಿಂದ ಈಶ್ವರ ವಿದ್ಯಾಲಯ ತಂಡವನ್ನು ಮಣಿಸಿ ಸೆಮಿ ಫೈನಲ್‌ ಪ್ರವೇಶಿಸಿದರು.

ಅಣ್ಣಯ್ಯಪ್ಪ ಭೈರವೇಶ್ವರ ಶಾಲೆ ತಂಡವು 15–13ರಿಂದ ಐಡಿಯಲ್‌ ಜಾವಾ ರೋಟರಿ ಶಾಲೆ, ಶ್ರೀ ಕಾವೇರಿ ಶಾಲೆ ತಂಡದವರು 10–7ರಿಂದ ಶಿಷ್ಕರಿಣಿ ತಂಡದವರನ್ನು ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.

ADVERTISEMENT

ಕೊಕ್ಕೊ ಟೂರ್ನಿ ಫಲಿತಾಂಶ (ಸೆಮಿಫೈನಲ್‌ ತಲುಪಿದವರು): 14 ವರ್ಷದೊಳಗಿನ ಬಾಲಕರ ವಿಭಾಗ : ಟೆರಿಷಿಯನ್‌, ಅಣ್ಣಯ್ಯಪ್ಪ ಭೈರವೇಶ್ವರ ಶಾಲೆ, ಈಶ್ವರ ವಿದ್ಯಾಲಯ, ಐಡಿಯಲ್‌ ಜಾವಾ ಶಾಲೆ.

17 ವರ್ಷದೊಳಗಿನ ಬಾಲಕರ ವಿಭಾಗ: ಅಣ್ಣಯ್ಯಪ್ಪ ಶಾಲೆ, ಕರ್ನಾಟಕ ಪಬ್ಲಿಕ್‌ ಶಾಲೆ ಕುವೆಂಪು ನಗರ, ಶ್ರೀಕಾವೇರಿ,

ಬಾಲಕಿಯರ ವಿಭಾಗ: ಐಡಿಯಲ್‌ ಜಾವಾ, ಅಣ್ಣಯಪ್ಪ ಭೈರವೇಶ್ವರ, ಕೆ.ಪುಟ್ಟಸ್ವಾಮಿ, ಹರಿವಿದ್ಯಾಲಯ.

ವಾಲಿಬಾಲ್‌ (ಸೆಮಿಫೈನಲ್‌ ತಲುಪಿದವರು): 14 ವರ್ಷದೊಳಗಿನ ಬಾಲಕರ ವಿಭಾಗ: ಐಡಿಯಲ್ ಜಾವಾ ರೋಟರಿ ಶಾಲೆ, ವಿಜಯವಿಠ್ಠಲ, ಶ್ರೀಪರಮಹಂಸ ಶಾಲೆ, ವಿದ್ಯಾವರ್ಧಕ ಶಾಲೆ,

ಬಾಲಕಿಯರ ವಿಭಾಗ: ಟೆರಿಶಿಯನ್, ವಿದ್ಯಾವರ್ಧಕ, ರೋಟರಿ ವೆಸ್ಟ್ ಸರಸ್ವತಿಪುರಂ, ಶ್ರೀಶಾರದಾ ಪಬ್ಲಿಕ್ ಶಾಲೆ,

17 ವರ್ಷದೊಳಗಿನ ಬಾಲಕರ ವಿಭಾಗ: ಗೀತಾ ಭಾರತಿ ಸಿದ್ಧಾರ್ಥ ನಗರ, ಜೆಎಸ್‌ಎಸ್ ಸರಸ್ವತಿಪುರಂ, ವಿಜಯವಿಠ್ಠಲ ಶಾಲೆ, ಮಹರ್ಷಿ ಪಬ್ಲಿಕ್ ಶಾಲೆ,

ಬಾಲಕಿಯರ ವಿಭಾಗ: ರೋಟರಿ ವೆಸ್ಟ್, ಐಡಿಯಲ್‌ ಜಾವಾ ರೋಟರಿ, ವಿಜಯವಿಠ್ಠಲ ಶಾಲೆ, ಬೃಂದಾವನ ಶಾಲೆ.

ಟೂರ್ನಿಯಲ್ಲಿ 46 ಶಾಲೆಗಳ 1260 ಮಕ್ಕಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.