ಮೈಸೂರು: ಷೇರು ಮಾರುಕಟ್ಟೆಗೆ ಹೂಡಿಕೆ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯು ಆನಂದ ನಗರದ ನಿವಾಸಿ ಸುಮಾ ಯದ್ರಾಮಿ ಅವರಿಂದ ಆನ್‌ಲೈನ್ ಮೂಲಕ ₹9.27 ಲಕ್ಷ ಪಡೆದು ವಂಚಿಸಿದ್ದಾನೆ.
ವಾಟ್ಸ್‌ಆ್ಯಪ್ ಮೂಲಕ ಸುಮಾ ಅವರನ್ನು ಸಂಪರ್ಕಿಸಿದ ವ್ಯಕ್ತಿಯು ಅವರನ್ನು ‘ಸ್ಟಾಕ್ ಸ್ಟಾಟರ್ಜಿ ಎಕ್ಸ್‌ಚೇಂಜ್’ ಹೆಸರಿನ ಗುಂಪಿಗೆ ಸೇರಿಸಿದ್ದಾನೆ. ನಂತರ ವಿವಿಧ ಸಂಖ್ಯೆಗಳಿಂದ ಹೂಡಿಕೆಗೆ ಸಂಬಂಧಿಸಿ ಸಂದೇಶಗಳು ಬಂದಿದ್ದು, ಹಂತ ಹಂತವಾಗಿ ತನ್ನ ಖಾತೆಗೆ ಹಣ ಹಾಕಿಸಿಕೊಂಡಿದ್ದು, ಅದನ್ನು ಮರಳಿಸದಿದ್ದಾಗ ಅನುಮಾನಗೊಂಡು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೈಸೂರು: ಇಲ್ಲಿನ ಗಣೇಶ ನಗರದ ನಿವಾಸಿ ಮಮತಾ ಅವರ ಮನೆ ಬಾಗಿಲು ಮುರಿದ ಕಳ್ಳರು ₹51 ಸಾವಿರ ಮೌಲ್ಯದ ಚಿನ್ನದ ಆಭರಣ ಹಾಗೂ ₹90 ಸಾವಿರ ನಗದು ಕಳವು ಮಾಡಿದ್ದಾರೆ.
‘ನಾನು ಗಂಡನ ಜೊತೆಗೆ ಮಂಗಳವಾರ ಸಂಬಂಧಿಕರ ಮನೆಗೆ ತೆರಳಿದ್ದು, ಶುಕ್ರವಾರ ಮನೆಗೆ ಬಂದು ನೋಡಿದಾಗ ಬಾಗಿಲು ಮೀಟಿ ಕಳ್ಳತನ ಮಾಡಿರುವುದು ಗೊತ್ತಾಗಿದೆ. 4 ಗ್ರಾಂ ತೂಕದ ಚಿನ್ನದ ಓಲೆ, 8 ಗ್ರಾಂ ತೂಕದ 3 ಚಿನ್ನದ ಉಂಗುರ, 5 ಗ್ರಾಂ ತೂಕದ ಒಂದು ಜೊತೆ ಕಿವಿಯ ಗುಂಡು ಹಾಗೂ ₹90 ಸಾವಿರ ನಗದು ಕಳವಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.