ಮೈಸೂರು: ‘ಕೆ.ಆರ್. ನಗರ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಾಗುವ ಮುನ್ನವೇ ಸತೀಶ್ ಬಾಬು ಅವರನ್ನು ಎಸ್‌ಐಟಿಯವರು ವಶಕ್ಕೆ ಪಡೆದಿದ್ದರು’ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ದೂರಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ರಾತ್ರಿ 9ರ ನಂತರ ಪ್ರಕರಣ ದಾಖಲಾಗಿದೆ. ಆದರೆ, ಅಂದು ಮಧ್ಯಾಹ್ನ 12ರ ವೇಳೆಗೇ ಸತೀಶ್ ಬಾಬು ಅವರನ್ನು ಪೊಲೀಸರು ಕರೆದೊಯ್ದಿ ದ್ದರು’ ಎಂದು ಆರೋಪಿಸಿದರು.
‘ಬೇಕರಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆ ಯಾಗಿದ್ದವು. ಮೈಸೂರಿನಿಂದ ಎಸ್‌ಐ ಒಬ್ಬರು ಕಾರ್‌ನಲ್ಲಿ ಬಂದು ಆ ದಾಖಲೆಗಳನ್ನು ನಾಶಪಡಿಸಿದ್ದಾರೆ’ ಎಂದು ದೂರಿದರು. ‘ಲಭ್ಯ ದಾಖಲೆಗಳನ್ನು ನಮ್ಮ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ’ ಎಂದರು.
‘ಮಹಿಳೆ ಅಪಹರಣ ಸಂಬಂಧ ದೂರು ನೀಡಿದ ವ್ಯಕ್ತಿ ಅಮಾಯಕ. ಆತನಿಗೆ ಹಣ ನೀಡಿ ಖಾಲಿ ಪೇಪರ್‌ನಲ್ಲಿ ಸಹಿ ಪಡೆದುಕೊಂಡಿದ್ದಾರೆ. ಆತ ಈಗ ಎಲ್ಲಿದ್ದಾನೆ, ಎಲ್ಲಿಗೆ ಹೋಗಿ ದ್ದಾನೆ?’ ಎಂದು ಅಚ್ಚರಿಯಿಂದ ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.