ADVERTISEMENT

ಶ್ವಾನದಳದ ‘ಸೀಮಾ’ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 2:44 IST
Last Updated 21 ಜನವರಿ 2021, 2:44 IST
ಮೈಸೂರು ನಗರ ಪೊಲೀಸ್ ಘಟಕದ ಶ್ವಾನದಳದ ‘ಸೀಮಾ’ ಶ್ವಾನದ ಅಂತಿಮದರ್ಶನವನ್ನು ಪೊಲೀಸರು ಬುಧವಾರ ಪಡೆದರು
ಮೈಸೂರು ನಗರ ಪೊಲೀಸ್ ಘಟಕದ ಶ್ವಾನದಳದ ‘ಸೀಮಾ’ ಶ್ವಾನದ ಅಂತಿಮದರ್ಶನವನ್ನು ಪೊಲೀಸರು ಬುಧವಾರ ಪಡೆದರು   

ಮೈಸೂರು:ಇಲ್ಲಿನ ನ್ಯಾಯಾಲಯದಲ್ಲಿ 2016ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದ ಸಂದರ್ಭದಲ್ಲಿ ಪರಿಣಾಮ
ಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ನಗರ ಪೊಲೀಸ್ ಘಟಕದ ಶ್ವಾನದಳದ ‘ಸೀಮಾ’ ಶ್ವಾನವು ವಯೋಸಹಜ ಕಾಯಿಲೆಯಿಂದ ಬುಧವಾರ ಮೃತಪಟ್ಟಿತು.

ಸರಿಸುಮಾರು 11 ವರ್ಷ 2 ತಿಂಗಳುಗಳ ‍ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಈ ಶ್ವಾನಕ್ಕೆ ವಯಸ್ಸಾಗಿತ್ತು. ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಶಿವರಾಜು ಅವರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಸ್ಫೋಟಕ ಪತ್ತೆ ಕಾರ್ಯದಲ್ಲಿ ಅತ್ಯಂತ ಚುರುಕಿನಿಂದ ಕಾರ್ಯನಿರ್ವಹಿಸುತ್ತಿದ್ದ ಈ ಶ್ವಾನವನ್ನು 2009ರ ನವೆಂಬರ್ 14ರಂದು ಸೂಕ್ತ ತರಬೇತಿಗಳೊಂದಿಗೆ ಇಲಾಖೆಗೆ ಸೇರಿಸಿಕೊಳ್ಳಲಾಗಿತ್ತು. ಹಲವು ಶ್ವಾನಪ್ರದರ್ಶನಗಳು ಹಾಗೂ ಅಣಕು ಕಾರ್ಯಾಚರಣೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಇದು ಸಫಲವಾಗಿತ್ತು. ಜಿ.ಮಂಜು ಅವರು ಇದರ ತರಬೇತುದಾರರಾಗಿದ್ದರು.

ADVERTISEMENT

ಗಣ್ಯ ವ್ಯಕ್ತಿಗಳ ಭದ್ರತೆ, ನಾಡಹಬ್ಬ ದಸರಾ ಮಹೋತ್ಸವದಲ್ಲಿ ಬಂದೋಬಸ್ತ್ ಸಂದರ್ಭದಲ್ಲಿ ಎಎಸ್‌ಸಿ ತಂಡದೊಂದಿಗೆ ಚುರುಕಿನಿಂದ ಕಾರ್ಯನಿರ್ವಹಿಸುತ್ತಿತ್ತು.

ಅಂತಿಮ ಸಂಸ್ಕಾರದ ವೇಳೆ ಡಿಸಿಪಿ ಶಿವರಾಜು, ಎಸಿಪಿ ಸುದರ್ಶನ್, ಶ್ವಾನದಳದ ಉಸ್ತುವಾರಿ ಅಧಿಕಾರಿ ಕೆ.ಎಂ.ಮೂರ್ತಿ, ಇನ್‌ಸ್ಪೆಕ್ಟರ್ , ಸುರೇಶ್ ಹಾಗೂ ಶ್ವಾನದಳದ ಇತರೆ ಅಧಿಕಾರಿ ಸಿಬ್ಬಂದಿ ಭಾಗವಹಿಸಿದ್ದರು.

ಸದ್ಯ, 12 ನಾಯಿಗಳು ಶ್ವಾನದಳದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.