ADVERTISEMENT

ಹುಣಸೂರು | 141 ಹಿರಿಯ ನಾಗರಿಕರಿಂದ ಮತದಾನ

ಜಿಪಿಎಸ್ ತಂತ್ರಜ್ಞಾನ ಬಳಸಿ ಮತದಾರನ ಮನೆಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 15:59 IST
Last Updated 15 ಏಪ್ರಿಲ್ 2024, 15:59 IST
ಹುಣಸೂರು ತಾಲ್ಲೂಕಿನಲ್ಲಿ ಸೋಮವಾರ ಹಿರಿಯ ನಾಗರಿಕರ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿ ಮತಗಟ್ಟೆ 69ರ ಹಗರನಹಳ್ಳಿಯ ಜಾನಕಮ್ಮ ಮತದಾನ ಮಾಡಿದರು
ಹುಣಸೂರು ತಾಲ್ಲೂಕಿನಲ್ಲಿ ಸೋಮವಾರ ಹಿರಿಯ ನಾಗರಿಕರ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿ ಮತಗಟ್ಟೆ 69ರ ಹಗರನಹಳ್ಳಿಯ ಜಾನಕಮ್ಮ ಮತದಾನ ಮಾಡಿದರು   

ಹುಣಸೂರು: ‘ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಜಿ.ಪಿ.ಎಸ್ ತಂತ್ರಜ್ಞಾನ ಬಳಸಿ ಹುಣಸೂರು ವಿಧಾನಸಭಾ ಕ್ಷೇತ್ರದ 93 ಮತಗಟ್ಟೆಯಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ 149 ಹಿರಿಯ ನಾಗರಿಕರು, ಅಂಗವಿಕಲ ಮತದಾರರ ಮನೆ ಬಾಗಿಲಿಗೆ ಅಧಿಕಾರಿಗಳು ತೆರಳಿ ಚುನಾವಣಾ ಪ‍್ರಕ್ರಿಯೆ ನಡೆಸಿದ್ದಾರೆ’ ಎಂದು ಚುನಾವಣಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ತಿಳಿಸಿದರು.

‘ತಾಲ್ಲೂಕಿನಲ್ಲಿ 149 ಹಿರಿಯ ನಾಗರಿಕರನ್ನು ಗುರುತಿಸಿ ಪಟ್ಟಿ ಮಾಡಿದ್ದು, 40 ಚುನಾವಣಾಧಿಕಾರಿಗಳು 41 ಪಂಚಾಯಿತಿಗಳಲ್ಲಿ ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಎರಡು ದಿನದ ಮತದಾನ ಪ್ರಕ್ರಿಯೆಯಲ್ಲಿ ಮೊದಲ ದಿನದಂದು 149 ರಲ್ಲಿ 141 ಜನರು ಮತದಾನ ಮಾಡಿದ್ದಾರೆ. 5 ಮತದಾರರು ನಿಧನರಾಗಿದ್ದು, 3 ಮಂದಿ ಮನೆಯಲ್ಲಿ ಇಲ್ಲದ ಕಾರಣ 16ರಂದು ಮತ್ತೊಮ್ಮೆ ಚುನಾವಣಾಧಿಕಾರಿಗಳ ತಂಡ ಸಂಬಂಧಿಸಿದ ಮತದಾರನ ಮನೆಗೆ ತೆರಳಲಿದ್ದರು’ ಎಂದು ಮಾಹಿತಿ ನೀಡಿದರು.

‘ಜಿ.ಪಿ.ಎಸ್ ತಂತ್ರಜ್ಞಾನ ಬಳಕೆಯಿಂದಾಗಿ ಮತದಾನ ಪ್ರಕ್ರಿಯೆ ವೇಗವಾಗಿ ನಡೆಸಲು ಸಾಧ್ಯವಾಗಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.