ADVERTISEMENT

ರಾಮ ಮಂದಿರ ಉದ್ಘಾಟನೆ ದೇಶದ ಪಾಲಿಗೆ ಸುದಿನ: ಶಿವಕುಮಾರ್

ಸಾರ್ವಜನಿಕರಿಗೆ ಮಂತ್ರಾಕ್ಷತೆ ವಿತರಿಸಿದ ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 16:27 IST
Last Updated 5 ಜನವರಿ 2024, 16:27 IST
ಮೈಸೂರಿನ ಕುವೆಂಪುನಗರದ ನವಿಲು ರಸ್ತೆ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳ ಮನೆಗೆ ತೆರಳಿದ ಮಾಜಿ ಮೇಯರ್ ಶಿವಕುಮಾರ್ ಮಂತ್ರಾಕ್ಷತೆ ವಿತರಿಸಿದರು
ಮೈಸೂರಿನ ಕುವೆಂಪುನಗರದ ನವಿಲು ರಸ್ತೆ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳ ಮನೆಗೆ ತೆರಳಿದ ಮಾಜಿ ಮೇಯರ್ ಶಿವಕುಮಾರ್ ಮಂತ್ರಾಕ್ಷತೆ ವಿತರಿಸಿದರು   

ಮೈಸೂರು: ಅಯೋಧ್ಯೆಯ ರಾಮಜನ್ಮ ಸ್ಥಳದಿಂದ ಬಂದಿರುವ ಮಂತ್ರಾಕ್ಷತೆಯನ್ನು ಮಾಜಿ ಮೇಯರ್ ಶಿವಕುಮಾರ್ ಸಾರ್ವಜನಿಕರಿಗೆ ಗುರುವಾರ ವಿತರಿಸಿದರು.

ಕುವೆಂಪುನಗರದ ನವಿಲು ರಸ್ತೆ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳ ಮನೆಗೆ ಖುದ್ದಾಗಿ ತೆರಳಿ ಮನೆಯ ಎಲ್ಲ ಸದಸ್ಯರಿಗೂ ಮಂತ್ರಾಕ್ಷತೆ ವಿತರಿಸಿ ಶುಭ ಕೋರಿದರು.

ಈ ವೇಳೆ ಮಾತನಾಡಿ, ‘ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಇದು ದೇಶದ ಪಾಲಿಗೆ ಸುದಿನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಇಂತಹ ಮಹತ್ಕಾರ್ಯ ನಡೆಯುತ್ತಿರುವುದು ಎಲ್ಲರ ಸುದೈವ. ಇಂತಹ ಹೊಸತನವನ್ನು ಬಿಜೆಪಿಯಿಂದ ಮಾತ್ರ ನಿರೀಕ್ಷಿಸಬಹುದು’ ಎಂದು ಹೇಳಿದರು.

ADVERTISEMENT

ಕುವೆಂಪುನಗರ ವಾರ್ಡ್ ಅಧ್ಯಕ್ಷ ಸಂಪತ್, ಮುಖಂಡರಾದ ರಾಮದಾಸ್, ಶಾಂತವೀರಪ್ಪ, ಉಪೇಂದ್ರ, ಸೋಮು, ಉಮಾ, ಮಾಲಾ, ನಾಗೇಶ್, ಕೋಮಲಾ, ಚಂದ್ರಶೇಖರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.