ADVERTISEMENT

ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 15:33 IST
Last Updated 8 ಅಕ್ಟೋಬರ್ 2024, 15:33 IST
ಜಿ. ಪರಮೇಶ್ವರ
ಜಿ. ಪರಮೇಶ್ವರ   

ಮೈಸೂರು: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಐದು ವರ್ಷ ಕಾಲ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ’ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ ಈಗಾಗಲೇ ಹೈಕಮಾಂಡ್ ಈ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಿದೆ. ಮುಡಾ ಪ್ರಕರಣದಲ್ಲೂ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ. ಸದ್ಯಕ್ಕೆ ರಾಜ್ಯದಲ್ಲಿ ಸಿ.ಎಂ. ಹುದ್ದೆ ಖಾಲಿ ಇಲ್ಲ’ ಎಂದರು.

ಸಚಿವರು–ಶಾಸಕರೊಂದಿಗೆ ಸತೀಶ ಜಾರಕಿಹೊಳಿ ಭೇಟಿ ಕುರಿತು ಪ್ರತಿಕ್ರಿಯಿಸಿ ‘ ನಾನೂ ಸಹ ಕೆಲವರನ್ನು ಆಗಾಗ್ಗೆ ಭೇಟಿ ಮಾಡುತ್ತೇನೆ. ಮಹದೇವಪ್ಪ, ಸತೀಶ ಹಾಗೂ ನಾನು ಜೊತೆಗೆ ಕಾಫಿ ಕುಡಿಯುತ್ತೇವೆ. ಅಷ್ಟಕ್ಕೇ ಬೇರೆ ಅರ್ಥ ಕಲ್ಪಿಸುವುದು ಬೇಡ’ ಎಂದರು.

ADVERTISEMENT

‘ಹರಿಯಾಣ ಸೋಲಿಗೆ ಮುಡಾ ಹಗರಣ ಕಾರಣ’ ಎಂಬ ಕಾಂಗ್ರೆಸ್ ಮುಖಂಡ ಕೆ.ಬಿ. ಕೋಳಿವಾಡ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ‘ ಸೋಲಿಗೆ ಕಾರಣ ಏನು ಎಂದು ಪಕ್ಷದ ಹೈಕಮಾಂಡ್‌ ಚರ್ಚೆ ಮಾಡಲಿದೆ. ಮೋದಿ ಪ್ರಚಾರದ ವೇಳೆ ಮುಡಾ ಹಗರಣ ಸಂಬಂಧ ಮಾತನಾಡಿದ್ದಾರೆ. ಅದು ಅಲ್ಲಿ ವರ್ಕೌಟ್ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಅದೇ ಸೋಲಿಗೆ ಕಾರಣ ಎಂದು ಹೇಳಲು ಆಗದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.