ADVERTISEMENT

ಮೈಸೂರು ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದ ಚೀತಾ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 19:08 IST
Last Updated 18 ಆಗಸ್ಟ್ 2020, 19:08 IST
   

ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯಕ್ಕೆ, ದಕ್ಷಿಣ ಆಫ್ರಿಕಾದ ಮೂರು ಚೀತಾಗಳು ಸೇರ್ಪಡೆಗೊಂಡಿವೆ.

ಪ್ರಾಣಿ ವಿನಿಮಯ ಯೋಜನೆಯಡಿ, ಜೋಹಾನ್ಸ್‌ಬರ್ಗ್‌ನ ಆನ್‌ ವ್ಯಾನ್ ಡೈಕ್ ಚೀತಾ ಕೇಂದ್ರದಿಂದ ಒಂದು ಗಂಡು ಚೀತಾ (14 ತಿಂಗಳು) ಹಾಗೂ ಕ್ರಮವಾಗಿ 15 ಮತ್ತು 16 ತಿಂಗಳಿನ ಎರಡು ಹೆಣ್ಣು ಚೀತಾಗಳು ಸೋಮವಾರ ರಾತ್ರಿ ಬಂದಿದ್ದು, ಕ್ವಾರಂಟೈನ್‌ನಲ್ಲಿವೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಳಿವಿನಂಚಿನಲ್ಲಿರುವ ಈ ಪ್ರಭೇದದ ಚೀತಾಗಳು ದೇಶದಲ್ಲಿ ಮೈಸೂರು ಹೊರತುಪಡಿಸಿದರೆ, ಹೈದರಾಬಾದ್ ಮೃಗಾಲಯದಲ್ಲಿ ಮಾತ್ರ ವೀಕ್ಷಣೆಗೆ ಸಿಗುತ್ತವೆ. ಇಂಥ ಚೀತಾಗಳು, 2011ರಿಂದ 2019ರವರೆಗೂ ಮೈಸೂರು ಮೃಗಾಲಯದಲ್ಲಿದ್ದವು’ ಎಂದು ಹೇಳಿದರು.

ADVERTISEMENT

30 ದಿನದ ಕ್ವಾರಂಟೈನ್ ಮುಗಿದ ಬಳಿಕ ವಿದೇಶಿ ಚೀತಾಗಳ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ ಎಂದು ಅಜಿತ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.