ADVERTISEMENT

‘ಚಾಕೊಲೇಟ್ ಗಣೇಶ’ ಹಂಚಿಕೆ ನಾಳೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 16:23 IST
Last Updated 3 ಸೆಪ್ಟೆಂಬರ್ 2022, 16:23 IST
ಚಾಕೊಲೇಟ್ ಗಣಪ ಜೊತೆ ಚೈತ್ರಾ
ಚಾಕೊಲೇಟ್ ಗಣಪ ಜೊತೆ ಚೈತ್ರಾ   

ಮೈಸೂರು: ಗಣೇಶ ಚತುರ್ಥಿ ಅಂಗವಾಗಿ ಇಲ್ಲಿನ ಸರಸ್ವತಿಪುರಂನ 11ನೇ ಕ್ರಾಸ್‌ನ ನಿವಾಸಿ ಚೈತ್ರಾ ಅವರು ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ‘ಚಾಕೊಲೇಟ್ ಗಣೇಶ ಮೂರ್ತಿ’ಯನ್ನು ಸೆ.4ರಂದು (ಭಾನುವಾರ) ವಿಸರ್ಜಿಸಲಿದ್ದಾರೆ.

ತಮ್ಮ ಮನೆಯಲ್ಲಿ ‘ಯಮ್ಮಿ ಜಂಕ್ಷನ್‌’ ಎನ್ನುವ ಚಿಕ್ಕದಾದ ಬೇಕರಿಯನ್ನು ನಡೆಸುತ್ತಿದ್ದಾರೆ. ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸುವುದಕ್ಕಾಗಿ 11 ಕೆ.ಜಿ. ತೂಕದ (ಗಣೇಶ, ಗೌರಿ ಹಾಗೂ ಮೂಷಿಕ ಸೇರಿ) ಚಾಕೊಲೇಟ್ ಗಣೇಶ ಸಿದ್ಧಪಡಿಸಿದ್ದು ಗಮನಸೆಳೆದಿತ್ತು.

‘ಆ ಮೂರ್ತಿಯನ್ನು ಹಾಲಿನಲ್ಲಿ ವಿಸರ್ಜಿಸಲಿದ್ದೇನೆ. ಆ ಚಾಕೊಲೇಟ್ ಹಾಲನ್ನು ತಿಲಕ್‌ನಗರದ ವಾಕ್ ಮತ್ತು ಶ್ರವಣ ದೋಷವುಳ್ಳವರ ಶಾಲೆ ಮಕ್ಕಳಿಗೆ ಹಾಗೂ ಮೇಟಗಳ್ಳಿಯ ಅನಾಥಾಶ್ರಮದ ನಿವಾಸಿಗಳಿಗೆ ವಿತರಿಸಲಿದ್ದೇನೆ. ಜಲ ಮೂಲಗಳನ್ನು ಕಲುಷಿತಗೊಳಿಸಬಾರದು ಎಂಬ ಕಾರಣಕ್ಕೆ ಪರಿಸರ ಸ್ನೇಹಿಯಾದ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಘ್ನ ನಿವಾರಕ ಗಣೇಶನನ್ನು ಪೂಜಿಸಿದ್ದೆ’ ಎನ್ನುತ್ತಾರೆ ಚೈತ್ರಾ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.