ADVERTISEMENT

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ: ₹2.14 ಕೋಟಿ ಹುಂಡಿ ಹಣ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 20:07 IST
Last Updated 15 ಡಿಸೆಂಬರ್ 2023, 20:07 IST
<div class="paragraphs"><p>ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಹುಂಡಿಗಳ ಎಣಿಕೆ ಕಾರ್ಯ ನಡೆಯಿತು</p></div>

ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಹುಂಡಿಗಳ ಎಣಿಕೆ ಕಾರ್ಯ ನಡೆಯಿತು

   

ನಂಜನಗೂಡು: ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ 35 ಹುಂಡಿಗಳನ್ನು ಶುಕ್ರವಾರ ತೆರೆದು ಏಣಿಕೆ ಕಾರ್ಯ ನಡೆಸಿದ್ದು, ₹2.14 ಕೋಟಿ ಸಂಗ್ರಹಗೊಂಡಿದೆ.

ಹುಂಡಿಗಳಲ್ಲಿ ₹2,14,52,984 ನಗದು, 98 ಗ್ರಾಂ ಚಿನ್ನ, 4.5 ಕೆ.ಜಿ ಬೆಳ್ಳಿ ಹಾಗೂ 190 ವಿದೇಶಿ ಕರೆನ್ಸಿಗಳು ಲಭ್ಯವಾಗಿವೆ.

ADVERTISEMENT

ಬ್ಯಾಂಕ್‍ ಆಫ್ ಬರೋಡಾ ಹಾಗೂ ದೇವಾಲಯದ ಸಿಬ್ಬಂದಿ ಹಾಗೂ ಸ್ತ್ರೀಶಕ್ತಿ ಸಂಘಗಳ 100ಕ್ಕೂ ಹೆಚ್ಚು ಮಹಿಳೆಯರು ಎಣಿಕೆ ಕಾರ್ಯಕ್ಕೆ ನೆರವಾದರು.

ಮುಜರಾಯಿ ತಹಶೀಲ್ದಾರ್ ವಿದ್ಯುಲ್ಲತ, ತಲಕಾಡು ವೈದ್ಯನಾಥೇಶ್ವರ ದೇವಾಲಯದ ಇಒ ವೆಂಕಟೇಶ್ ಪ್ರಸಾದ್, ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಇಒ ಜಗದೀಶ್‍ಕುಮಾರ್, ಎಇಒ ಸತೀಶ್, ಲೆಕ್ಕ ಅಧೀಕ್ಷಕ ಗುರುಮಲ್ಲಯ್ಯ, ಬಿಒಬಿ ಮ್ಯಾನೇಜರ್ ಟಿ.ಕೆ.ನಾಯಕ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.