ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಸತತ 9ನೇ ಬಾರಿ ಪ್ರಥಮ

​ಪ್ರಜಾವಾಣಿ ವಾರ್ತೆ
Published 9 ಮೇ 2023, 14:37 IST
Last Updated 9 ಮೇ 2023, 14:37 IST

ಪಿರಿಯಾಪಟ್ಟಣ: ಎಸ್ಸೆಸ್ಸೆಲ್ಸಿಯಲ್ಲಿ ಶೇ 97.59ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಬಿಇಒ ಬಸವರಾಜು ತಿಳಿಸಿದ್ದಾರೆ.

‘ತಾಲ್ಲೂಕು ಸತತ 9ನೇ ಬಾರಿಯೂ ಮೊದಲ ಸ್ಥಾನ ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ’ ಎಂದು ಮಂಗಳವಾರ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ತಾಲ್ಲೂಕಿನಲ್ಲಿ 1502 ಬಾಲಕರು ಮತ್ತು 1362 ಬಾಲಕಿಯರು ಸೇರಿ ಒಟ್ಟು 2864 ಮಂದಿ ಪರೀಕ್ಷೆ ಎದುರಿಸಿದ್ದರು. ಇದರಲ್ಲಿ 1450 ಬಾಲಕರು ಮತ್ತು 1345 ಬಾಲಕಿಯರು ಸೇರಿ ಒಟ್ಟು 2795 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

31 ಶಾಲೆಗಳು ಶೇಕಡ 100 ಫಲಿತಾಂಶ

ತಾಲೂಕಿನಲ್ಲಿ ಒಟ್ಟು 49 ಪ್ರೌಢಶಾಲೆಗಳಿದ್ದು, ಇವುಗಳ ಪೈಕಿ 14 ಸರ್ಕಾರಿ ಶಾಲೆಗಳು ಮತ್ತು 5 ಅನುದಾನಿತ ಶಾಲೆಗಳು ಮತ್ತು 12 ಖಾಸಗಿ ಶಾಲೆಗಳು ಸೇರಿ ಒಟ್ಟು 31 ಶಾಲೆಗಳಲ್ಲಿ ಶೇಕಡ 100 ರಷ್ಟು ಫಲಿತಾಂಶ ಬಂದಿದೆ.

ತಾಲ್ಲೂಕಿನ ಬೆಟ್ಟದಪುರದ ಡಿಟಿಎಂಎನ್ ಶಾಲೆಯ 5 ವಿದ್ಯಾರ್ಥಿಗಳು ತಾಲ್ಲೂಕಿನ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಇದರಲ್ಲಿ ಎಲ್.ಪಿ.ಧನ್ಯಾ (612), ಕೆ.ಎಸ್.ವೇಣುಗೋಪಾಲ್ (612), ಡಿ.ಚಂದ್ರಕಲಾ (611), ಜೆ.ಸಿಂಚನಾ(611), ಸೌಜನ್ಯ ಆರ್.ಗೌಡ (610) ಸಾಧನೆ ಮಾಡಿದ್ದಾರೆ.

ಸರ್ಕಾರಿ ಪ್ರೌಢಶಾಲೆಯಲ್ಲಿ ಹಂಡಿತವಳ್ಳಿ ಪ್ರೌಢಶಾಲೆಯ ಕೆ.ಆರ್.ಬಿಂದು (601), ಬೆಟ್ಟದಪುರ ಪ್ರೌಢಶಾಲೆಯ ಎಂ.ಆರ್.ಚೇತನ್‌ಗೌಡ (603), ಹಾರನಹಳ್ಳಿಯ ಸರಕಾರಿ ಪ್ರೌಢಶಾಲೆಯ ರಂಜಿತ (606), ಎಚ್.ಟಿ.ರಾಧಾ (601), ಬೆಣಗಾಲಿನ ಸಾನ್ಯ (600) ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.