ಮೈಸೂರು: ‘ಮುಖ್ಯಮಂತ್ರಿ ಸಿದ್ದ ರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮುಡಾದಿಂದ 50:50 ಅನುಪಾತದಲ್ಲಿ ಮಂಜೂರಾಗಿದ್ದ ಬದಲಿ ನಿವೇಶನದ ಕ್ರಯಪತ್ರ ಸಂದರ್ಭ ಖರೀದಿದಾರರಾದ ಪಾರ್ವತಿ ಬದಲಿಗೆ ಮುಡಾದ ವಿಶೇಷ ತಹಶೀಲ್ದಾರ್ ಮುದ್ರಾಂಕ ಶುಲ್ಕವನ್ನು ಪಾವತಿಸಿದ್ದಾರೆ. ಇದು ಪ್ರಕರಣದಲ್ಲಿ ಸಿದ್ದರಾಮಯ್ಯ ಪ್ರಭಾವ ಬೀರಿರುವುದಕ್ಕೆ ಸಾಕ್ಷಿಯಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಈ ಕುರಿತು ಫೇಸ್‌ಬುಕ್ ಖಾತೆಯಲ್ಲಿ ದಾಖಲೆಗಳನ್ನು ಹಂಚಿಕೊಂಡಿರುವ ಕೃಷ್ಣ ‘ಕ್ರಯಪತ್ರವನ್ನು ನೋಂದಣಿ ಮಾಡಿಸಿ ಕೊಳ್ಳುವವರು ಅದಕ್ಕೆ ಸಂಬಂಧಿಸಿದ ಶುಲ್ಕಗಳನ್ನು ಪಾವತಿ ಮಾಡಬೇಕು. ಆದರೆ ಪಾರ್ವತಿ ಅವರಿಗೆ 2022ರ ಜ.12ರಂದು ಮುಡಾ ಮಾಡಿಕೊಟ್ಟಿರುವ ನಿವೇಶನದ ಕ್ರಯಪತ್ರ ದಾಖಲೆಯಲ್ಲಿ ಮಾರಾಟಗಾರರಾದ ಮುಡಾ ವಿಶೇಷ ತಹಶೀಲ್ದಾರ್ ನಿಗದಿತ ಮುದ್ರಾಂಕ ಶುಲ್ಕ ಕಟ್ಟಿದ್ದಾರೆ. ಇದಕ್ಕೆ ಜನತೆಗೆ ಸಿದ್ದರಾಮಯ್ಯ ಉತ್ತರಿಸುವರೇ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.