ADVERTISEMENT

ಮೈಸೂರು: ಜೂನ್ 26ರಿಂದ ರಾಜ್ಯಮಟ್ಟದ ಅಥ್ಲೆಟಿಕ್ಸ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 4:23 IST
Last Updated 15 ಜೂನ್ 2024, 4:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮೈಸೂರು: ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜೂನ್ 26ರಿಂದ 29ರವರೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೈಸೂರು ಪ್ರಾದೇಶಿಕ ಕೇಂದ್ರದ ವತಿಯಿಂದ 25ನೇ ರಾಜ್ಯಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟ ಆಯೋಜಿಸಲಾಗಿದೆ.

‘ರಾಜ್ಯದ 200 ಎಂಜಿನಿಯರಿಂಗ್ ಕಾಲೇಜುಗಳ 2 ಸಾವಿರ ಕ್ರೀಡಾಪಟುಗಳು 23 ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದು, ಕ್ರೀಡಾಕೂಟಕ್ಕೆ 26ರಂದು ಬೆಳಿಗ್ಗೆ 10ಕ್ಕೆ ರಾಷ್ಟ್ರೀಯ ಅಥ್ಲಿಟ್‌ ಅಶ್ವಿನಿ ನಾಚಪ್ಪ ಚಾಲನೆ ನೀಡುವರು. ಕುಲಪತಿ ‍ಪ್ರೊ.ಎಸ್‌.ವಿದ್ಯಾಶಂಕರ್‌ ಪಾಲ್ಗೊಳ್ಳುವರು’ ಎಂದು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಟಿ.ಪಿ.ರೇಣುಕಮೂರ್ತಿ, ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಗೆದ್ದವರಿಗೆ ಪದಕಗಳನ್ನು ನೀಡಲಾಗುವುದು. ತೀರ್ಪುಗಾರರಾಗಿ 200 ಕ್ರೀಡಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಇರಲಿದೆ’ ಎಂದರು. 

ಗೋಷ್ಠಿಯಲ್ಲಿ ಯತೀಶ್‌ ಚಂದ್ರ, ಪ್ರಸನ್ನಕುಮಾರ್, ಜಿ.ಎಫ್‌.ಅತೀಕ್ ಅಹಮದ್‌, ರಘುನಾಥ್ ಹಾಜರಿದ್ದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.