ADVERTISEMENT

ನಿಮ್ಮ ಆರೋಗ್ಯಕ್ಕೆ ನೀವೇ ವೈದ್ಯರು: ಎಸ್‌.ಪಿ. ಯೋಗಣ್ಣ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 5:21 IST
Last Updated 24 ಜೂನ್ 2024, 5:21 IST
<div class="paragraphs"><p>ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ರಾಜ್ಯ ಮಟ್ಟದ ಪ್ರಥಮ ಯೋಗ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಎ.ಆರ್. ಸೀತಾರಾಂ, ಎ.ಎನ್. ಮೂರ್ತಿ, ಶಶಿರೇಖಾ, ಸಿ. ರಮೇಶ್‌ ಶೆಟ್ಟಿ, ಎಂ.ಎಸ್. ರಮೇಶ್‌ಕುಮಾರ್ ಅವರಿಗೆ ‘ಯೋಗ ರತ್ನಾಕರ’ ಪ್ರಶಸ್ತಿ ಪ್ರದಾನ ಮಾಡಲಾಯಿತು– ಪ್ರಜಾವಾಣಿ ಚಿತ್ರ</p></div>

ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ರಾಜ್ಯ ಮಟ್ಟದ ಪ್ರಥಮ ಯೋಗ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಎ.ಆರ್. ಸೀತಾರಾಂ, ಎ.ಎನ್. ಮೂರ್ತಿ, ಶಶಿರೇಖಾ, ಸಿ. ರಮೇಶ್‌ ಶೆಟ್ಟಿ, ಎಂ.ಎಸ್. ರಮೇಶ್‌ಕುಮಾರ್ ಅವರಿಗೆ ‘ಯೋಗ ರತ್ನಾಕರ’ ಪ್ರಶಸ್ತಿ ಪ್ರದಾನ ಮಾಡಲಾಯಿತು– ಪ್ರಜಾವಾಣಿ ಚಿತ್ರ

   

ಮೈಸೂರು: ‘ನಿಮ್ಮ ಆರೋಗ್ಯಕ್ಕೆ ನೀವೇ ವೈದ್ಯರಾಗಬೇಕು. ದೇಹಕ್ಕೆ ಪಂಚಭೂತಗಳನ್ನು ಔಷಧಿಯಾಗಿ ಬಳಸಿದಲ್ಲಿ ಆರೋಗ್ಯ ಉತ್ತಮವಾಗಿರುತ್ತದೆ’ ಎಂದು ಯೋಗ ಸಮ್ಮೇಳನ ಸಮಿತಿಯ ಅಧ್ಯಕ್ಷ ಎಸ್‌.ಪಿ. ಯೋಗಣ್ಣ ಹೇಳಿದರು.

ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟವು ಕಲಾಮಂದಿರದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಪ್ರಥಮ ಯೋಗ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

ADVERTISEMENT

‘ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಯೋಗ ಶಿಕ್ಷಣದ ಅಗತ್ಯವಿದೆ. ಆಧುನಿಕ ಜೀವನ ಶೈಲಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಜೀವನ ಶೈಲಿ ಬದಲಾವಣೆ ಮಾಡಿಕೊಂಡು ಪ್ರತಿನಿತ್ಯ ಊಟ ನಿದ್ರೆಯಂತೆ ಯೋಗವನ್ನೂ ದಿನಚರಿ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಶಾಲೆಗಳಲ್ಲಿ ಮತ್ತೆ ಯೋಗ ಶಿಕ್ಷಣ ಜಾರಿ ಮಾಡುವುದಾಗಿ ಆರೋಗ್ಯ ಸಚಿವರು ಹೇಳಿದ್ದಾರೆ. ಈಗ ಸಣ್ಣ ಮಕ್ಕಳಲ್ಲಿ ಮಾನಸಿಕ ಒತ್ತಡ, ಮಧುಮೇಹ, ಥೈರಾಯ್ಡ್‌, ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಪ್ರತಿನಿತ್ಯ ಯೋಗ ಮಾಡುವುದರಿಂದ ಮಾನಸಿಕ ಸಮತೋಲನ, ಏಕಾಗ್ರತೆ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.

ನೈಪುಣ್ಯ ಶಾಲೆ ಸಂಸ್ಥಾಪಕ ಆರ್‌. ರಘು ಮಾತನಾಡಿ, ‘ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಸಮ್ಮೇಳನಾಧ್ಯಕ್ಷ ಕೆ.ಎಲ್‌. ಶಂಕರನಾರಾಯಣ ಜೋಯಿಸ್‌ ಅಧ್ಯಕ್ಷತೆ ವಹಿಸಿದ್ದರು. ನಿಮ್ಹಾನ್ಸ್‌ನ ನರರೋಗ ತಜ್ಞ ರಾಜಶೇಖರ ರೆಡ್ಡಿ, ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಕೆ.ಎಸ್‌. ರಾಧಾಕೃಷ್ಣ ರಾಮರಾವ್, ಸಂಸ್ಕೃತಿ ಪ್ರತಿಷ್ಠಾನದ ಮುಖ್ಯಸ್ಥ ಎಂ.ಎ. ಆಳ್ವಾರ್‌, ಮೈಸೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಉಪಾಧ್ಯಕ್ಷ ರವಿಶಾಸ್ತ್ರಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಇದ್ದರು.

ಪಿ.ಎನ್. ಗಣೇಶ್‌ಕುಮಾರ್‌ ತಂಡದವರು ಯೋಗ ಪ್ರಾತ್ಯಕ್ಷಿಕೆ ನೀಡಿದರು. ಇದಕ್ಕೂ ಮುನ್ನ ಯೋಗ ಕುರಿತು ವಿವಿಧ ವಿಚಾರ ಗೋಷ್ಠಿಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.