ADVERTISEMENT

ಸುತ್ತೂರು: ಅಲ್ಲಮಪ್ರಭು ಜಯಂತಿ ಮಾರ್ಚ್‌ 22ರಂದು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 16:06 IST
Last Updated 20 ಮಾರ್ಚ್ 2023, 16:06 IST

ಮೈಸೂರು: ನಂಜನಗೂಡು ತಾಲ್ಲೂಕು ಸುತ್ತೂರು ಕ್ಷೇತ್ರದಲ್ಲಿ ಮಾರ್ಚ್ 22ರಂದು ಯುಗಾದಿ, ಅಲ್ಲಮಪ್ರಭು ಜಯಂತಿ ಹಾಗೂ ಪಂಚಾಂಗ ಶ್ರವಣ ಕಾರ್ಯಕ್ರಮವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದೆ.

ಶಿವರಾತ್ರೀಶ್ವರ ಶಿವಯೋಗಿ ಕರ್ತೃ ಗದ್ದುಗೆಯಲ್ಲಿ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಬೆಳ್ಳಿರಥ ಪ್ರಾಕಾರೋತ್ಸವ ನೆರವೇರಲಿದೆ. ಸೋಮೇಶ್ವರ, ಮಹದೇಶ್ವರ, ವೀರಭದ್ರೇಶ್ವರ, ನಂಜುಂಡೇಶ್ವರ ಮತ್ತು ನಾರಾಯಣಸ್ವಾಮಿ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನಡೆಯಲಿದೆ. ಶ್ರೀಮಠದ ಹಾಗೂ ಗ್ರಾಮದ ಹೊನ್ನೇರು ಬಂಡಿಗಳು ಮಂಗಳವಾದ್ಯ ಹಾಗೂ ಕಲಾತಂಡಗಳೊಂದಿಗೆ ಶ್ರೀಮಠದಿಂದ ಹೊರಟು, ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಹೊಸ ವರ್ಷದ ಕೃಷಿ ಕಾಯಕಕ್ಕೆ ಚಾಲನೆ ನೀಡಿ, ಕರ್ತೃಗದ್ದುಗೆಯನ್ನು ಸಂದರ್ಶಿಸಿ ಶ್ರೀಮಠಕ್ಕೆ ಹಿಂದಿರುಗಲಿವೆ.

9.30ಕ್ಕೆ ಜೆಎಸ್‌ಎಸ್ ವಸತಿ ಶಾಲೆಯ ಸಂಗೀತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ವಚನ ಗಾಯನ ಕಾರ್ಯಕ್ರಮವಿದೆ. 10.30ಕ್ಕೆ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ವಿಜಯಕುಮಾರಿ ಎಸ್. ಕರಿಕಲ್‌ ‘ಅಲ್ಲಮಪ್ರಭು ದೇವರ ವಚನಗಳ ವೈಶಿಷ್ಟ್ಯ’ ವಿಷಯದ ಕುರಿತು ಉಪನ್ಯಾಸ ನೀಡುವರು. ಮೈಸೂರಿನ ಭಾರತೀಯ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದಿಂದ ಪ್ರಕಟವಾಗಿರುವ ‘ಸುತ್ತೂರು ಶಿವರಾತ್ರೀಶ್ವರ ಪಂಚಾಂಗ’ವನ್ನು ಕೆ.ಜಿ. ಪುಟ್ಟಹೊನ್ನಯ್ಯ ಪಠಣ ಮಾಡಿ, ಸಂವಾದ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.