ತಿ. ನರಸೀಪುರ: ವಿದ್ಯುತ್ ಸ್ಪರ್ಶಕ್ಕೀಡಾಗಿ ಮೃತ ಪಟ್ಟಿದ ತಾಲ್ಲೂಕಿನ ಕನ್ನನಾಯಕನಹಳ್ಳಿ ಗ್ರಾಮದ ರೈತ ನಿಂಗೇಗೌಡರ ಕುಟುಂಬದವರಿಗೆ ಸೆಸ್ಕ್ ನಿಂದ ₹ 5 ಲಕ್ಷದ ಚೆಕ್ ಅನ್ನು ಕಾರ್ಯಪಾಲಕ ಎಂಜಿನಿಯರ್ ವೀರೇಶ್ ಹಸ್ತಾಂತರಿಸಿದರು.
ಮುಖಂಡರಾದ ಉಕ್ಕಲಗೆರೆ ಬಸವಣ್ಣ, ಕನ್ನಾಯಕನಳ್ಳಿಯ ಮುದ್ದೇಗೌಡ, ಮಹೇಶ್ ನಾಗೇಂದ್ರ, ಕೆಇಬಿ ಕುಮಾರ್, ಡಿಎಸ್ ಎಸ್ ನ ಮರಿಸ್ವಾಮಿ, ಸಚಿವರ ಆಪ್ತ ಸಹಾಯಕ ಬಸವರಾಜು ಹಾಗೂ ಸೆಸ್ಕ್ ಸಿಬ್ಬಂದಿ ಉಪಸ್ಥಿತರಿದ್ದರು.
ಗ್ರಾಮದ ಬಳಿ ಹಸು ಹಾಗೂ ಮೇಕೆಗಳನ್ನು ಮೇಯಿಸಲು ಬುಧವಾರ ತೆರಳಿದ್ದ ವೇಳೆ ಕನ್ನಾಯಕನಹಳ್ಳಿ ಗ್ರಾಮದ ನಿಂಗೇಗೌಡ ಅವರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿಮೃತಪಟ್ಟರು. ಇವರ ಜತೆಯಲ್ಲಿದ್ದ ಮೇಕೆಯೂ ಮೃತಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.