ತಲಕಾಡು: ಕನ್ನಡ ಸಾಹಿತ್ಯ ಪರಿಷತ್‌ನಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ ಪ್ರಯುಕ್ತ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಕಸಾಪ ಹೋಬಳಿ ಘಟಕದ ಅಧ್ಯಕ್ಷ ವೆಂಕಟೇಶ್ ವಿನಾಯಕ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಮಂಗಳವಾರ ನಡೆಯಿತು.
ನ.29ರಂದು ರಾಜ್ಯೋತ್ಸವ ಆಚರಣೆ ಮಾಡಲು ತೀರ್ಮಾನಿಸಲಾಯಿತು.
ನಾಡಕಚೇರಿ ಉಪತಹಶೀಲ್ದಾರ್ ಈ.ಕುಮಾರ್ ಮಾತನಾಡಿ, ‘ಕನ್ನಡದ ಹಿರಿಮೆ, ಗರಿಮೆಯನ್ನು ಸಾರುವಂತೆ ಕಾರ್ಯಕ್ರಮ ಆಯೋಜಿಸಲಾಗುವುದು. ರಾಜ್ಯೋತ್ಸವಕ್ಕೆ ಎಲ್ಲ ಇಲಾಖೆಗಳು ಸಹಕಾರ ನೀಡಬೇಕು’ ಎಂದು ಕೋರಿದರು.
ನಿವೃತ ಪ್ರಾಂಶುಪಾಲ ವೆಂಕಟರಂಗಯ್ಯ ಮಾತನಾಡಿ, ‘ಗಂಗರ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಉದ್ದೇಶದಿಂದ ಹಂಪಿ ಉತ್ಸವ, ಕದಂಬೋತ್ಸವ ಕಾರ್ಯಕ್ರಮದಂತೆ ತಲಕಾಡು ಗಂಗೋತ್ಸವ ಆಚರಿಸಬೇಕು’ ಎಂದು ಮನವಿ ಮಾಡಿದರು.
ಸಬ್ ಇನ್‌ಸ್ಪೆಕ್ಟರ್ ತಿರುಮಲ್ಲೇಶ್, ಪ್ರಾಂಶುಪಾಲರಾದ ವಸಂತ್ ಕುಮಾರ್, ವೆಂಕಟರಂಗಯ್ಯ, ನಾಗರತ್ನ, ಆನಂದ್ ದೀಕ್ಷಿತ್, ಆರೋಗ್ಯ ನಿರೀಕ್ಷಕ ಸಿದ್ದಲಿಂಗಪ್ಪ, ಪಂಚಾಯಿತಿ ಕಾರ್ಯದರ್ಶಿ ರಾಜಶೇಖರ್ ಶೆಟ್ಟಿ, ವಾರ್ಡನ್ ಭಲೇಂದ್ರ ಕುಮಾರ್, ಎಚ್.ರಾಜು, ಶ್ರೀನಿವಾಸರಾವ್, ನರೇಂದ್ರ, ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಪಾರ್ವತಮ್ಮ, ಶಾಂತರಾಜು, ಗೊಲ್ಲ ಶಾಂತಕುಮಾರ್, ರಮೇಶ್, ಪುಟ್ಟಸ್ವಾಮಿ, ಮಹದೇವಣ್ಣ, ಕೃಷ್ಣ, ನಂಜುಂಡಸ್ವಾಮಿ, ರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.