ADVERTISEMENT

‘ತಂತ್ರಜ್ಞಾನ ಬಳಕೆ: ಎಚ್ಚರ ಅಗತ್ಯ’

ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 4:12 IST
Last Updated 8 ನವೆಂಬರ್ 2024, 4:12 IST
<div class="paragraphs"><p>ಮೈಸೂರಿನ ಕೆಎಸ್‌ಒಯುನಲ್ಲಿ ಗುರುವಾರ ನಡೆದ ‘ಕಲೆ ಮತ್ತು ಮನಸ್ಸು ಉತ್ಸವ’ವನ್ನು ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಉದ್ಘಾಟಿಸಿದರು.&nbsp; ಜಿ.ಬಿ.ಶೈಲೇಶ್ ರಾಜ್ ಅರಸ್‌, ಸಿ.ವಿ.ಶ್ರೀನಾಥ್ ಶೆಟ್ಟಿ, ಕೆ.ದೀಪಕ್, ಪ್ರೊ.ವೆಂಕಟರಮಣ ಶೆಟ್ಟಿ, ಪ್ರೊ.ಎನ್‌.ಲಕ್ಷ್ಮಿ, ಪ್ರೊ.ಕೆ.ಅಪರ್ಣಾ ರಾವ್ ಪಾಲ್ಗೊಂಡಿದ್ದರು </p></div>

ಮೈಸೂರಿನ ಕೆಎಸ್‌ಒಯುನಲ್ಲಿ ಗುರುವಾರ ನಡೆದ ‘ಕಲೆ ಮತ್ತು ಮನಸ್ಸು ಉತ್ಸವ’ವನ್ನು ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಉದ್ಘಾಟಿಸಿದರು.  ಜಿ.ಬಿ.ಶೈಲೇಶ್ ರಾಜ್ ಅರಸ್‌, ಸಿ.ವಿ.ಶ್ರೀನಾಥ್ ಶೆಟ್ಟಿ, ಕೆ.ದೀಪಕ್, ಪ್ರೊ.ವೆಂಕಟರಮಣ ಶೆಟ್ಟಿ, ಪ್ರೊ.ಎನ್‌.ಲಕ್ಷ್ಮಿ, ಪ್ರೊ.ಕೆ.ಅಪರ್ಣಾ ರಾವ್ ಪಾಲ್ಗೊಂಡಿದ್ದರು

   

–ಪ್ರಜಾವಾಣಿ ಚಿತ್ರ

ಮೈಸೂರು: ‘ಎಲ್ಲ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆವರಿಸಿದ್ದು, ಆಲೋಚನೆ, ಸೃಜನಶೀಲ ಗುಣವನ್ನು ಹೊಸಕಿಹಾಕಿದೆ. ತಂತ್ರಜ್ಞಾನ ಬಳಕೆಯಲ್ಲಿ ಎಚ್ಚರವಹಿಸಬೇಕು’ ಎಂದು ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಪ್ರತಿಪಾದಿಸಿದರು.

ADVERTISEMENT

ಕೆಎಸ್‌ಒಯು ಕಾವೇರಿ ಸಭಾಂಗಣದಲ್ಲಿ ನ್ಯಾಷನಲ್ ಆ್ಯಂಟಿ ಡ್ಯುಪ್ಲಿಕೇಶನ್ ಬ್ಯೂರೋ, ವಿಶ್ವವಿದ್ಯಾಲಯದ ಪತ್ರಿಕೋದ್ಯಮ, ಸಮೂಹ ಸಂವಹನ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಗುರುವಾರ ಆಯೋಜಿಸಿದ್ದ ‘ಕಲೆ ಮತ್ತು ಮನಸ್ಸು ಉತ್ಸವ 2024’ದಲ್ಲಿ ಮಾತನಾಡಿ, ‘ಎಲ್ಲ ಕೆಲಸಗಳು ವೇಗವಾಗಿ ಆಗಬೇಕೆಂಬುದೇ ಎಲ್ಲರ ಗುರಿಯಾಗಿದೆ. ಹೀಗಾಗಿ ಹೆಚ್ಚು ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ಅದರ ಅತಿಯಾದ ಅವಲಂಬನೆ ಒಳ್ಳೆಯದಲ್ಲ’ ಎಂದರು.

‘ಆಲೋಚನಾ ಶಕ್ತಿಗಳಿಗೆ ತಂತ್ರಜ್ಞಾನವೂ ವೈರಸ್ ಆಗಿದೆ. ಮೊಬೈಲ್‌ ಫೋನ್‌ನ ಅತಿಯಾಗಿ ಅವಲಂಬನೆಯಿಂದ ಸ್ವ–ಆಲೋಚನೆ ಇಲ್ಲವಾಗಿದೆ. ಗ್ಲೋಬಲ್‌ ಆಗಿ ಬೆಳೆಯುವ ಬದಲು ಗೂಗಲ್‌ಗೆ ಸೀಮಿತಗೊಂಡಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳು ಬುದ್ಧಿವಂತಿಕೆ ಹಾಗೂ ನಾಯಕತ್ವ ಗುಣ ಬೆಳೆಸಿಕೊಂಡು ಗುರಿಯತ್ತ ಲಕ್ಷ್ಯವಹಿಸಬೇಕು. ಗುರಿ ಸಾಕಾರಗೊಳಿಸಲು ನೈತಿಕ ಮಾರ್ಗವನ್ನೇ ಆಯೋಜಿಸಬೇಕು. ಹೀಗಾದರೆ ಮಾತ್ರ ಸಮಾಜವೂ ಚೆನ್ನಾಗಿರುತ್ತದೆ. ದೇಶದ ಮಹನೀಯರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ’ ಎಂದರು.

ಶೈಕ್ಷಣಿಕ ಡೀನ್ ಪ್ರೊ.ಎನ್‌.ಲಕ್ಷ್ಮಿ, ‘ತಂತ್ರಜ್ಞಾನ ಅಭಿವೃದ್ಧಿಯಿಂದಾಗಿಯೇ ದೇಶದಲ್ಲಿ ಡಿಜಿಟಲ್‌ ಕ್ರಾಂತಿಯಾಗಿದೆ. ಶಿಕ್ಷಣವೂ ವೇಗವಾಗಿ ಬೆಳವಣಿಗೆ ಆಗುತ್ತಿದೆ. ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು. ಕಲೆ ಮತ್ತು ಸಾಹಿತ್ಯ ಪಠ್ಯದ ಭಾಗವಾಗಬೇಕಿದೆ’ ಎಂದು ಹೇಳಿದರು.

‘ಇದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳು ಪರಿಶ್ರಮ ಪಡುವ ಜೊತೆಗೆ ಆತ್ಮಾಭಿಮಾನ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢವಾಗಬೇಕು’ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಐಎಎಂಇ ನಿರ್ದೇಶಕಿ ಪ್ರೊ.ಕೆ.ಅಪರ್ಣಾ ರಾವ್, ಪ್ರೊ.ವೆಂಕಟರಮಣ ಶೆಟ್ಟಿ, ಎನ್‌ಎಡಿಬಿ ಉಪಾಧ್ಯಕ್ಷ ಸಿ.ವಿ ಶ್ರೀನಾಥ್ ಶೆಟ್ಟಿ, ವಿಭಾಗದ ಮುಖ್ಯಸ್ಥ ಜಿ.ಬಿ.ಶೈಲೇಶ್ ರಾಜ್ ಅರಸ್‌ ಹಾಜರಿದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.