ADVERTISEMENT

ಕಾಲ ಬಂದಾಗ ಎಲ್ಲ ಹೇಳುವೆ: ಶಾಸಕ ಎಚ್‌.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:44 IST
Last Updated 2 ಜುಲೈ 2024, 14:44 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ    

ಮೈಸೂರು: ‘ಪ್ರಜ್ವಲ್ ಹಾಗೂ ಸೂರಜ್ ವಿರುದ್ಧದ ಪ್ರಕರಣಗಳು ನ್ಯಾಯಾಲಯದ ಮುಂದಿವೆ. ಆ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಕಾಲ ಬಂದಾಗ, ಸತ್ಯವನ್ನು ಎಳೆ ಎಳೆಯಾಗಿ ಬಿಡಿಸಿ ಜನತೆ ಮುಂದಿಡುವೆ’ ಎಂದು ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು.

ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಯಾವುದಕ್ಕೂ ಎದೆಗುಂದುವುದಿಲ್ಲ. ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಎಂತೆಂಥವರಿಗೋ ಕಷ್ಟ ಬರುತ್ತದೆ, ಅದರಲ್ಲಿ ನಮ್ಮದೇನಿದೆ’ ಎಂದರು.

‘40 ವರ್ಷದ ರಾಜಕಾರಣ ಮಾಡಿದ್ದೇನೆ. 15 ವರ್ಷ ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ. ಇಲ್ಲಿಯವರೆಗೂ ದೇವರು, ಜನ ಕರೆತಂದಿದ್ದಾರೆ. ದೇವರ ಮೇಲೆ ನಂಬಿಕೆಯಿದೆ’ ಎಂದು ಹೇಳಿದರು.

ADVERTISEMENT

‘ಪ್ರಜ್ವಲ್ ಭೇಟಿ ಮಾಡಲು ಹೋದರೆ ರೇವಣ್ಣ ಏನೋ ಹೇಳಿಕೊಟ್ಟನೆನ್ನುತ್ತಾರೆ. ನಾನು ಯಾರ ಭೇಟಿಗೂ ಹೋಗುವುದಿಲ್ಲ. ನಿನ್ನೆ ಪತ್ನಿ ಭೇಟಿ ಮಾಡಿದ್ದು, ತಾಯಿ– ಮಗ ಏನು ಮಾತಾಡಿದ್ದಾರೆಂಬುದು ಗೊತ್ತಿಲ್ಲ. ಸೂರಜ್‌ ದೈವ ಭಕ್ತ, ಬಹಳ ಬೇಗ ಹೊರ ಬರುತ್ತಾನೆ ಅನ್ನೋ ನಂಬಿಕೆ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.