ADVERTISEMENT

‘ಟೈಮ್’ ಕಿರುಚಿತ್ರ ಪ್ರದರ್ಶನ ನಾಳೆ: ಬಿ.ಆರ್.ರಾಜೇಶ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 13:53 IST
Last Updated 28 ಜುಲೈ 2024, 13:53 IST
ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಕೆ.ಸಿ.ಶಿವಪ್ಪ, ಎಸ್.ಎಸ್‌.ಅಂಗಡಿ, ಅನಿತಾ ಮಂಡ್ಯ, ಎಸ್‌.ನಾನಾ ಸಾಹೇಬ್‌ ಅವರಿಗೆ ನಿವೃತ್ತ ಐಎಎಸ್‌ ಅಧಿಕಾರಿ ಸಿ.ಸೋಮಶೇಖರ್‌ ಅವರು ‘ಕಮಲಮ್ಮ ಮತ್ತು ಜಿ.ಎ. ಶಿವಲಿಂಗಯ್ಯ ಶರಣ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿದರು
ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಕೆ.ಸಿ.ಶಿವಪ್ಪ, ಎಸ್.ಎಸ್‌.ಅಂಗಡಿ, ಅನಿತಾ ಮಂಡ್ಯ, ಎಸ್‌.ನಾನಾ ಸಾಹೇಬ್‌ ಅವರಿಗೆ ನಿವೃತ್ತ ಐಎಎಸ್‌ ಅಧಿಕಾರಿ ಸಿ.ಸೋಮಶೇಖರ್‌ ಅವರು ‘ಕಮಲಮ್ಮ ಮತ್ತು ಜಿ.ಎ. ಶಿವಲಿಂಗಯ್ಯ ಶರಣ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿದರು   

ಮೈಸೂರು: ವಿಶ್ವ ಹುಲಿ ದಿವಸ ಅಂಗವಾಗಿ ವೈಲ್ಡ್ ವಂಡರ್ಸ್ ಮೀಡಿಯಾದಿಂದ ನಿರ್ಮಿಸಿರುವ ‘ಟೈಮ್’ ಕಿರುಚಿತ್ರ ಪ್ರದರ್ಶನ ಜುಲೈ 29ರ ಸಂಜೆ 6.30ಕ್ಕೆ ನಗರದ ರಮಾಗೋವಿಂದ ರಂಗಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಬಿ.ಆರ್.ರಾಜೇಶ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರದರ್ಶನದ ನಂತರ ನಿರ್ದೇಶಕ ವಿನಯ್ ಹಾಗೂ ಚಿತ್ರ ತಂಡದ ಕಲಾವಿದರು, ತಂತ್ರಜ್ಞರೊಂದಿಗೆ ಸಂವಾದ ಇರಲಿದ್ದು, ಸುಮಾರು 27 ನಿಮಿಷ ಅವಧಿಯದ್ದಾಗಿದೆ’ ಎಂದು ತಿಳಿಸಿದರು.

ನಟ ರಾಘವೇಂದ್ರ ಬೂದನೂರ್, ವನ್ಯಜೀವಿ ತಜ್ಞ ಸೋಮಶೇಖರ್, ರಂಗವಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಜೇಶ್, ರವಿಪ್ರಸಾದ್, ಮಹೇಶ್‌ ಕುಮಾರ್ ಹಾಜರಿರುವರು. ಇದು ಉಚಿತ ಪ್ರದರ್ಶನವಾಗಿದ್ದು, ವನ್ಯಜೀವಿ ಆಸಕ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ADVERTISEMENT

ಮಾಹಿತಿಗೆ ಮೊ.99013 09901, 99809 64229 ಸಂಪರ್ಕಿಸಬಹುದು.

ಸಂಸ್ಥೆಯ ಪ್ರಯಾಗ್ ಹಾಜರಿದ್ದರು.

‘ಕಾಯಕ ತತ್ವ ಸಾರಿದ ವಚನ’

ಮೈಸೂರು: ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಕೆ.ಸಿ.ಶಿವಪ್ಪ ಎಸ್.ಎಸ್‌.ಅಂಗಡಿ ಅನಿತಾ ಮಂಡ್ಯ ಎಸ್‌.ನಾನಾ ಸಾಹೇಬ್‌ ಅವರಿಗೆ ನಿವೃತ್ತ ಐಎಎಸ್‌ ಅಧಿಕಾರಿ ಸಿ.ಸೋಮಶೇಖರ್‌ ಅವರು ‘ಕಮಲಮ್ಮ ಮತ್ತು ಜಿ.ಎ. ಶಿವಲಿಂಗಯ್ಯ ಶರಣ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು ‘ವಚನ ಸಾಹಿತ್ಯವು ಜಗತ್ತಿನ ಇತರೆ ಸಾಹಿತ್ಯಕ್ಕಿಂತ ಭಿನ್ನವಾಗಿದ್ದು ಸಮಾಜದ ಎಲ್ಲಾ ಸ್ಥರಗಳ ಆಲೋಚನೆ ಹಾಗೂ ಚಿಂತನೆಯನ್ನು ಒಂದೇ ಕಡೆ ಸೇರಿಸುತ್ತದೆ. ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿ ಶೋಷಿತರಲ್ಲಿ ಆಶಾ ಭಾವನೆ ಉಂಟು ಮಾಡಿದೆ. ಜೀವನ ಸಾರ್ಥಕ್ಯದ ಬಗ್ಗೆ ಜನರಲ್ಲಿ ಚಿಂತನೆಗೆ ಕಾರಣವಾದ ವಚನಗಳಿಗೆ ಅಳಿವಿಲ್ಲ’ ಎಂದರು. ಎನ್.ಎಂ.ತಳವಾರ್ ದತ್ತಿ ದಾಸೋಹಿ ಪ್ರೊ.ಜಿ.ಎ.ಶಿವಲಿಂಗಯ್ಯ ಶರಣ ಸಾಹಿತ್ಯ ಪರಿಷತ್‌ ನಗರ ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಾಮಿ ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್‌ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಶಿ.ಗಾಂಜಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.