ಮೈಸೂರು: ‘ಹಿನಕಲ್‌ನ ರಾಕೇಶ್ ಪಾಪಣ್ಣ ಅವರ ಮನೆ ಮೇಲೆ ಸೋಮವಾರ ಇ.ಡಿ. ದಾಳಿ ನಡೆಸುವ ಮೂರು ದಿನ ಮುನ್ನವೇ, ಆ ಮನೆಯಲ್ಲಿದ್ದ ದಾಖಲೆಗಳನ್ನೆಲ್ಲ ಅದೇ ಊರಿನ ಇನ್ನೊಂದು ಮನೆಗೆ ಸಾಗಿಸಲಾಗಿದೆ. ಅವರ ಆಪ್ತರು, ಸ್ನೇಹಿತರ ಮನೆಗಳ ಮೇಲೆ ದಾಳಿ ನಡೆಸಿದರೆ ಎಲ್ಲ ದಾಖಲೆಗಳೂ ಸಿಗಲಿವೆ’ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
ಇ.ಡಿ. ದಾಳಿ ಕುರಿತು ನಗರದಲ್ಲಿ ಮಂಗಳವಾರ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ‘ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಯಾವುದೇ ಸಮರ್ಪಕ ದಾಖಲೆ ನೀಡದೇ, ಜಿಪಿಎ ಹೆಸರಿನಲ್ಲಿ ಮುಡಾದಿಂದ ಒಂದೇ ದಿನ 25 ಬದಲಿ ನಿವೇಶನ ಪಡೆದಿದ್ದರು. ನಂತರ ಸೆಟ್ಲ್‌ಮೆಂಟ್ ಡೀಡ್ ಹೆಸರಿನಲ್ಲಿ ಅದನ್ನು ಬೇಕಾದವರಿಗೆ ಹಂಚಿದ್ದರು. ಬೆಂಗಳೂರಿನ ಅವರ ನಿವಾಸದ ಮೇಲೂ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಮುಡಾ ಪ್ರಕರಣ ತಾರ್ಕಿಕ ಅಂತ್ಯ ಕಾಣಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.