ADVERTISEMENT

549 ಹಜ್‌ ಯಾತ್ರಾರ್ಥಿಗಳಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 2 ಮೇ 2024, 6:08 IST
Last Updated 2 ಮೇ 2024, 6:08 IST
ಮೈಸೂರಿನ ಉದಯಗಿರಿಯಲ್ಲಿ ಮಂಗಳವಾರ ನಡೆದ ಹಜ್‌ ಯಾತ್ರಾರ್ಥಿಗಳ ಲಸಿಕೆ ಶಿಬಿರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಅವರು ಯಾತ್ರಾರ್ಥಿಯೊಬ್ಬರಿಗೆ ಲಸಿಕೆ ನೀಡಿದರು. ಡಾ.ಎಂ.ಎಸ್. ಜಯಂತ್, ಡಾ. ಸಿರಾಜ್ ಅಹ್ಮದ್ ಭಾಗವಹಿಸಿದ್ದರು

ಮೈಸೂರು: ಹಜ್ ಯಾತ್ರೆಗೆ ತೆರಳುವ 549 ಯಾತ್ರಾರ್ಥಿಗಳಿಗೆ ಮಂಗಳವಾರ ನಗರದ ಉದಯಗಿರಿಯಲ್ಲಿ ಲಸಿಕೆ ನೀಡಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಹಜ್ ಸಮಿತಿಯಿಂದ ಹಜ್ ಯಾತ್ರಾರ್ಥಿಗಳಿಗೆ  ಲಸಿಕಾ ಶಿಬಿರ ಆಯೋಜಿಸಲಾಗಿತ್ತು.

ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ ಚಾಲನೆ ನೀಡಿ, ‘ಜಿಲ್ಲೆಯ 428 ಮಂದಿ, ಕೊಡಗಿನ 73 ಮತ್ತು ಚಾಮರಾಜನಗರದ 56 ಮಂದಿ ವಿವಿಧ ಸೋಂಕು ನಿರೋಧಕ ಲಸಿಕೆಯನ್ನು ಪಡೆದಿದ್ದಾರೆ. ಸಾಮಾನ್ಯವಾಗಿ ಬೇರೆ ದೇಶ, ರಾಜ್ಯಗಳಿಗೆ ತೆರಳುವ ಪ್ರಯಾಣಿಕರು ಕಾಯಿಲೆಗಳಿಗೆ, ವಿಭಿನ್ನ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆಯಿದ್ದು, ಈ ಲಸಿಕೆಗಳು ಕಾಯಿಲೆ ಬಾರದಂತೆ ತಡೆಯುತ್ತವೆ’ ಎಂದು ಹೇಳಿದರು.

ADVERTISEMENT

ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಎಂ.ಎಸ್. ಜಯಂತ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿರಾಜ್ ಅಹ್ಮದ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.