ADVERTISEMENT

ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಬೇಕಾದೀತು: ಸೋಮೇಶ್ವರನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 16:55 IST
Last Updated 6 ಡಿಸೆಂಬರ್ 2020, 16:55 IST
ಸೋಮೇಶ್ವರನಾಥ ಸ್ವಾಮೀಜಿ
ಸೋಮೇಶ್ವರನಾಥ ಸ್ವಾಮೀಜಿ   

ಮೈಸೂರು: ‘ಮೀಸಲಾತಿ ವಿಚಾರದಲ್ಲಿ ಒಕ್ಕಲಿಗರಿಗೆ ಅನ್ಯಾಯವಾಗುತ್ತಿದೆ. ಮೀಸಲಾತಿ ಪ್ರಮಾಣ ಹೆಚ್ಚಿಸದಿದ್ದರೆ ಪ್ರತ್ಯೇಕ ರಾಜ್ಯಕ್ಕಾಗಿ ಕೂಗು ಎಬ್ಬಿಸಬೇಕಾದೀತು’ ಎಂದು ಆದಿಚುಂಚನಗಿರಿ ಮೈಸೂರು ಶಾಖಾಮಠದ ಸೋಮೇಶ್ವರನಾಥ ಸ್ವಾಮೀಜಿ ಎಚ್ಚರಿಸಿದರು.

ಭಾನುವಾರ ನಡೆದ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಸಭೆಯಲ್ಲಿ ಮಾತನಾಡಿ, ’ಮೈಸೂರು ಅಥವಾ ಬೆಂಗಳೂರು ನಗರ ಬೆಳೆದಿರುವುದು ಒಕ್ಕಲಿಗ ಸಮಾಜದವರ ಆಸ್ತಿಯಿಂದ. ಈಗ ಅವರೆಲ್ಲರೂ ಆಸ್ತಿ ಕಳೆದುಕೊಂಡು ಕೂಲಿ ಮಾಡುತ್ತಿದ್ದಾರೆ. ಸರ್ಕಾರ ಶೇ 4 ರಷ್ಟು ಮಾತ್ರ ಮೀಸಲಾತಿ ನೀಡಿ ಅನ್ಯಾಯ ಮಾಡಿದೆ’ ಎಂದರು.

‘ಮೀಸಲಾತಿ ಪ್ರಮಾಣ ಹೆಚ್ಚಿಸಲು ಹೋರಾಟ ನಡೆಸುವ ಸಂಬಂಧ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಶಾಖಾ ಮಠಗಳಲ್ಲಿ, ಜಿಲ್ಲೆಗಳಲ್ಲಿ ಸಭೆ ಕರೆದಿದ್ದಾರೆ. ಎಲ್ಲ ಕಡೆಗಳಿಂದ ಸಮುದಾಯದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ನಮ್ಮ ಜನಾಂಗವನ್ನು ಮುಂದೆಯೂ ಇದೇ ರೀತಿ ತುಳಿಯುವುದಾದರೆ ನಾವು ಬೇರೆ ರಾಜ್ಯವನ್ನೇ ಕೇಳಬೇಕಾದೀತು ಎಂಬ ಸುಳಿವನ್ನೂ ಪೀಠಾಧ್ಯಕ್ಷರು ಕೊಟ್ಟಿದ್ದಾರೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.