ADVERTISEMENT

ಮತದಾರರಿದ್ದಾರೆ, ಪಟ್ಟಿಯಲ್ಲಿ ಹೆಸರಿಲ್ಲ!

ಮತದಾರರ ಪಟ್ಟಿಯಲ್ಲಿ ಮುಗಿಯದ ಗೊಂದಲ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 6:01 IST
Last Updated 19 ಏಪ್ರಿಲ್ 2019, 6:01 IST
   

ಮೈಸೂರು: ಮತದಾನ ಮಾಡಲು ಬಂದ ಅನೇಕರು ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲ ಎಂದು ತಿಳಿದು ನಿರಾಶರಾಗಿ ಹಿಂದಿರುಗಿದರು. ಉದಯಗಿರಿ ಮತ್ತು ಇಟ್ಟಿಗೆಗೂಡಿನಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬಂತು.

ಮತ್ತೆ ಕೆಲವು ಮತಗಟ್ಟೆಗಳಲ್ಲಿ ಮತದಾರರ ಹೆಸರುಗಳು ಬದಲಾಗಿದ್ದವು. ಮತಗಟ್ಟೆಯಿಂದ ಮತಗಟ್ಟೆಗಳಿಗೆ ಹಲವರು ಸುತ್ತುವಂತಾಯಿತು. ಬಹಳಷ್ಟು ಮಂದಿ ಬಸವಳಿದು ನಿರಾಸೆಯಿಂದ ತಮ್ಮ ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು.

ಮತದಾರರು ತಮ್ಮ ಹೆಸರನ್ನು ಹುಡುಕಲು ಇದ್ದ ವೆಬ್‌ಸೈಟ್‌ಗಳು ಹಾಗೂ ಮೊಬೈಲ್ ಆ್ಯಪ್‌ಗಳು ಸರಿಯಾದ ಮಾಹಿತಿ ಒದಗಿಸದೇ ಕೈಕೊಟ್ಟವು. ಇದನ್ನು ನಂಬಿ ಬಂದ ಅನೇಕರು ಮತಗಟ್ಟೆಯಿಂದ ಮತಗಟ್ಟೆಗೆ ಅಲೆಯುವಂತಾಯಿತು.

ADVERTISEMENT

ಚುನಾವಣಾ ಆಯೋಗ ಮತದಾರರ ಅನುಕೂಲಕ್ಕೆ ಚುನಾವಣಾ ಆ್ಯಪ್ ಅಭಿವೃದ್ಧಿಪಡಿಸಿತ್ತು. ವೆಬ್‌ಸೈಟ್‌ನಲ್ಲೂ ಮಾಹಿತಿ ನೀಡಿತ್ತು. ಇಷ್ಟಾದರೂ ಸಮರ್ಪಕ ಹಾಗೂ ನಿಖರ ಮಾಹಿತಿ ಒದಗಿಸುವಲ್ಲಿ ಇವು ಸೋತವು.

ಇಟ್ಟಿಗೆಗೂಡಿನ ಮತಗಟ್ಟೆಯೊಂದರಲ್ಲಿ ತನ್ನ ಹೆಸರನ್ನು ತೆಗೆಯಲಾಗಿದೆ. ಆದರೆ, ಈ ಕುರಿತು ನಾನು ಅರ್ಜಿ ನೀಡಿಯೇ ಇರಲಿಲ್ಲ ಎಂದು ರಂಜನಾ ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.