ADVERTISEMENT

ಮೈಸೂರು: ಕೆಎಂಪಿಕೆ ಟ್ರಸ್ಟ್‌ನಿಂದ ಪಕ್ಷಿಗೆ ನೀರಿನ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 5:03 IST
Last Updated 28 ಏಪ್ರಿಲ್ 2024, 5:03 IST
ಮೈಸೂರಿನ ಲಕ್ಷ್ಮಿಪುರಂನಲ್ಲಿ ಕೆಎಂಪಿಕೆ ಟ್ರಸ್ಟ್, ಅರಿವು ಸಂಸ್ಥೆಯಿಂದ ಪಕ್ಷಿಗಳಿಗಾಗಿ ಮರದಲ್ಲಿ ನೀರಿನ ಸಂಗ್ರಹ ಬುಟ್ಟಿ ಅಳವಡಿಸಲಾಯಿತು. ವಿಕ್ರಂ ಅಯ್ಯಂಗಾರ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಗಿರೀಶ್ ರಾಮ್ ಮೂರ್ತಿ, ಎಸ್.ಎನ್.ರಾಜೇಶ್, ಶ್ರೀಕಾಂತ್ ಕಶ್ಯಪ್, ಬೈರತಿ ಲಿಂಗರಾಜು, ಚಕ್ರಪಾಣಿ, ಮಹೇಶ್ ಕುಮಾರ್, ಭಂಡಾರಿ, ದಯಾನಂದ್ ಭಾಗವಹಿಸಿದ್ದರು

ಮೈಸೂರು: ನಗರದ ಲಕ್ಷ್ಮಿಪುರಂನಲ್ಲಿ ಕೆಎಂಪಿಕೆ ಟ್ರಸ್ಟ್ ಹಾಗೂ ಅರಿವು ಸಂಸ್ಥೆಯಿಂದ ಬಿಸಿಲಿನ ತಾಪಮಾನ ಹೆಚ್ಚಳದಿಂದಾಗಿ 30ರಿಂದ 40ಕ್ಕೂ ಹೆಚ್ಚು ಕಡೆಗಳಲ್ಲಿ ಪಕ್ಷಿಗಳಿಗೆ ನೀರಿನ ಸಂಗ್ರಹ ಬುಟ್ಟಿಗಳನ್ನು ಅಳವಡಿಸಲಾಯಿತು.

ಟ್ರಸ್ಟ್‌ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ‘ಎರಡು ತಿಂಗಳಿಂದ ವಿವಿಧ ಪ್ರದೇಶಗಳಲ್ಲಿ ಇಡಲಾಗಿದೆ. ಪ್ಲಾಸ್ಟಿಕ್ ಬೌಲ್‌ಗಳಲ್ಲಿ ನೀರನ್ನು ಹಾಕಿ ಗಿಡ ಮರಗಳಿಗೆ ಅಲ್ಲಲ್ಲಿ ಹಗ್ಗದಿಂದ ನೇತು ಹಾಕಿದ್ದೇವೆ. ಮನುಷ್ಯನಿಗೆ ಹೇಗೆ ದಿನನಿತ್ಯದ ಬದುಕಿನಲ್ಲಿ ಆಹಾರ, ನೀರು, ಗಾಳಿ ಬೇಕೋ ಹಾಗೆ ಪ್ರಾಣಿ ಪಕ್ಷಿಗಳಿಗೂ ಬೇಕು. ಅದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT