ADVERTISEMENT

HDK ಆರೋಪ ಸಾಬೀತುಪಡಿಸಿದರೆ ಸಿಎಂನಿಂದ ರಾಜೀನಾಮೆ ಕೊಡಿಸುತ್ತೇವೆ: ಲಕ್ಷ್ಮಣ್ ಸವಾಲು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 6:46 IST
Last Updated 17 ಸೆಪ್ಟೆಂಬರ್ 2024, 6:46 IST
<div class="paragraphs"><p>ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್</p></div>

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

   

ಮೈಸೂರು: ಇಲ್ಲಿನ ವಿಜಯನಗರ ಎರಡನೇ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 1997-99ರಲ್ಲಿ ನಿರ್ಮಿಸಿ ಮಾರಾಟ ಮಾಡಿದ ಮನೆಯ ಎಲ್ಲ ದಾಖಲೆಗಳೂ ಸಕ್ರಮವಾಗಿವೆ. ಅಕ್ರಮ ಆಗಿರುವುದನ್ನು ಎಚ್.ಡಿ. ಕುಮಾರಸ್ವಾಮಿ ಸಾಬೀತುಪಡಿಸಿದರೆ ನಾವೇ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಕೊಡಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸವಾಲು ಹಾಕಿದರು.

ವಿಜಯನಗರ ಎರಡನೇ ಹಂತದಲ್ಲಿ ಸಿದ್ದರಾಮಯ್ಯ ನಿರ್ಮಿಸಿ ಮಾರಾಟ ಮಾಡಿದ ಮನೆ

ADVERTISEMENT

'ಹಿನಕಲ್ ಗ್ರಾಮದ ಸರ್ವೆ ಸಂಖ್ಯೆ 70/ 4ಎ ರಲ್ಲಿ 80x 120. ಚ.ಅಡಿ ಅಳತೆಯ ನಿವೇಶನವನ್ನು ಸಿದ್ದರಾಮಯ್ಯ ಭೂಮಾಲೀಕರಾದ ಪಾಪಣ್ಣ ಕುಟುಂಬದವರಿಂದ ಖರೀದಿ ಮಾಡಿದ್ದರು. ಆ ಜಮೀನಿನನ್ನು ಮುಡಾ ನೋಟಿಫೈ ಮಾಡಿಲ್ಲ. ಸುಪ್ರೀಂ ಕೋರ್ಟ್ ಸಹ ಸಿದ್ದರಾಮಯ್ಯ ಪರ ತೀರ್ಪು ನೀಡಿದೆ. ಹೀಗಾಗಿ ಇಲ್ಲಿ ಅಕ್ರಮದ ಪ್ರಶ್ನೆಯೇ ಇಲ್ಲ' ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

ಎಚ್.ಡಿ. ಕುಮಾರಸ್ವಾಮಿ ಬರೀ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು. ಅವರು ಈ ಆರೋಪ ಸಾಬೀತುಪಡಿಸದೇ ಇದ್ದಲ್ಲಿ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.