ADVERTISEMENT

ವಿಶ್ವ ಜೇನು ನೊಣ ದಿನಾಚರಣೆ | ಜೇನು ನಶಿಸಿದರೆ ಮನುಷ್ಯರೂ ನಾಶ: ನಟರಾಜ್

ಕೆ.ಆರ್.ನಗರ: ವಿಶ್ವ ಜೇನು ನೊಣ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 25 ಮೇ 2024, 4:39 IST
Last Updated 25 ಮೇ 2024, 4:39 IST
ಕೆ.ಆರ್.ನಗರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ವಿಶ್ವ ಜೇನು ನೊಣ ದಿನಾಚರಣೆಯಲ್ಲಿ ಜೇನು ಕೃಷಿಕರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಡಿ.ನಟರಾಜ್, ಇಒ ಜಿ.ಕೆ.ಹರೀಶ್, ಸಂತೋಷ್ ಭಾಗವಹಿಸಿದ್ದರು
ಕೆ.ಆರ್.ನಗರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ವಿಶ್ವ ಜೇನು ನೊಣ ದಿನಾಚರಣೆಯಲ್ಲಿ ಜೇನು ಕೃಷಿಕರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಡಿ.ನಟರಾಜ್, ಇಒ ಜಿ.ಕೆ.ಹರೀಶ್, ಸಂತೋಷ್ ಭಾಗವಹಿಸಿದ್ದರು   

ಕೆ.ಆರ್.ನಗರ: ‘ಜೇನುನೊಣ ಮಾನವನಿಗೆ ಸಾಕಷ್ಟು ಸಹಕಾರಿಯಾಗಿದ್ದು, ಜೇನು ನೊಣದ ಸಂತತಿ ನಶಿಸಿದರೆ ಮನುಷ್ಯನ ಸಂತತಿಯೂ ನಶಿಸಿ ಹೋಗುತ್ತದೆ’ ಎಂದು ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಡಿ.ನಟರಾಜ್ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ವಿಶ್ವ ಜೇನು ನೊಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಸುಮಾರು 8ಸಾವಿರ ವರ್ಷಗಳಿಂದಲೂ ಜೇನನ್ನು ಉಪಯೋಗಿಸಲಾಗುತ್ತಿದೆ. ಕ್ರಮಬದ್ಧವಾಗಿ ಜೇನು ಸೇವಿಸುವ ಬಹುತೇಕರು ಆರೋಗ್ಯದಿಂದ ಜೀವಿಸುತ್ತಾರೆ. ಜೇನು ನೊಣ ಅದೊಂದು ಕೀಟವಾಗಿದ್ದು, ರಾಜ್ಯ ಸರ್ಕಾರ 2019ರಲ್ಲಿ ಜೇನು ನೊಣವನ್ನು ರಾಜ್ಯಕೀಟ ಎಂದು ಘೋಷಣೆ ಮಾಡಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಜೇನು ಜೇನು ಐನೂರು, ಸಾವಿರ ವರ್ಷ ಹಳೆಯದಾದರೂ ಕೆಡುವುದಿಲ್ಲ. ಜೇನು ಜೇನಾಗಿಯೇ ಉಳಿದಿರುತ್ತದೆ. ಜೇನು ಸಕ್ಕರೆಗಿಂತ ಶೇ 25ರಷ್ಟು ಹೆಚ್ಚು ಸಿಹಿಯಾಗಿರುತ್ತದೆ. ಸಕ್ಕರೆ ಕಾಯಿಲೆ ಇರುವ ರೋಗಿಗಳು ಕ್ರಮಬದ್ಧವಾಗಿ ಜೇನು ಬಳಸಬಹುದಾಗಿದೆ. ಕೊಬ್ಬಿನಾಂಶ, ತೂಕ ಕಡಿಮೆ ಮಾಡಿಕೊಳ್ಳಲು, ಒಳ್ಳೆಯ ನಿದ್ರೆ ಬರಲು, ಗಾಯ ವಾಸಿಮಾಡಿಕೊಳ್ಳಲು, ರಕ್ತ ಸಂಚಾರಕ್ಕಾಗಿ, ಆಯಸ್ಸು ಹೆಚ್ಚಿಸಿಕೊಳ್ಳಲು ಜೇನು ಬಳಕೆ ಮಾಡಿಕೊಳ್ಳಬಹುದಾಗಿದೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಕೆ.ಹರೀಶ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಮಾತನಾಡಿದರು. ಜೇನು ಕೃಷಿಕರಾದ ಬಸವರಾಜು, ಗುರುಪ್ರಸಾದ್ ಮತ್ತು ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ ಭಾಗವಹಿಸಿದ್ದರು.

ಸಾವಿರ ವರ್ಷವಾದರೂ ಕೆಡದ ಜೇನು ಆರೋಗ್ಯಕ್ಕಾಗಿ ಜೇನು ಬಳಸಿ ಜೇನಿನ ಸಂರಕ್ಷಣೆಗೆ ಮುಂದಾಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.