ADVERTISEMENT

ಯದುವೀರ್- ತ್ರಿಷಿಕಾ ದಂಪತಿಗೆ ಗಂಡು ಮಗು ಜನನ: ಅರಮನೆಯಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2024, 10:26 IST
Last Updated 11 ಅಕ್ಟೋಬರ್ 2024, 10:26 IST
   

ಮೈಸೂರು: ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ದಂಪತಿಗೆ ಎರಡನೇ ಗಂಡು ಮಗು ಜನನವಾಗಿದೆ.

ದಸರಾ ಸಂಭ್ರಮದಲ್ಲಿರುವ ದಂಪತಿ ಹಾಗೂ ರಾಜವಂಶಸ್ಥರಿಗೆ ಪುತ್ರ ಸಂತಾನದಿಂದ ಸಂತಸ ಇಮ್ಮಡಿಯಾಗಿದೆ.

2016ರಲ್ಲಿ ಮದುವೆಯಾಗಿದ್ದ ದಂಪತಿಗೆ 2017ರ ಡಿಸೆಂಬರ್‌ನಲ್ಲಿ ಆದ್ಯವೀರ್ ನರಸಿಂಹರಾಜ ಒಡೆಯರ್ ಜನಿಸಿದ್ದನು.

ADVERTISEMENT

ಖಾಸಗಿ ದರ್ಬಾರ್ ನಡೆಸಲು ಕಂಕಣಧಾರಿಯಾಗಿರುವ ಯದುವೀರ್ ನವರಾತ್ರಿಯ ಮಹಾನವಮಿ ಪೂಜೆಯಲ್ಲಿ ಪಾಲ್ಗೊಂಡಿದ್ದಾಗ ನಗರದ ಯಾದವಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ತ್ರಿಷಿಕಾ ಅವರಿಗೆ ಗಂಡು ಮಗು ಹುಟ್ಟಿದೆ ಎಂದು ಅರಮನೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.