ADVERTISEMENT

ಮುಕ್ತ ಯೋಗಾಸನ ಸ್ಪರ್ಧೆ: ವಿವಿಧ ಜಿಲ್ಲೆಗಳಿಂದ ಆಸಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 15:12 IST
Last Updated 30 ಜೂನ್ 2024, 15:12 IST
ಯೋಗಭವನದಲ್ಲಿ ಭಾನುವಾರ ನಡೆದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಪ್ರತಿಭೆ ಪ್ರದರ್ಶಿಸಿದ ಬಾಲಕರು –ಪ್ರಜಾವಾಣಿ ಚಿತ್ರ
ಯೋಗಭವನದಲ್ಲಿ ಭಾನುವಾರ ನಡೆದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಪ್ರತಿಭೆ ಪ್ರದರ್ಶಿಸಿದ ಬಾಲಕರು –ಪ್ರಜಾವಾಣಿ ಚಿತ್ರ   

ಮೈಸೂರು: ನಗರದ ಮೈಸೂರು ವಿ.ವಿ. ಯೋಗ ಭವನದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಯೋಗಪಟುಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು.

10ನೇ ಅಂತರರಾಷ್ಟ್ರೀಯ ಯೋಗ ದಿನೋತ್ಸವ ಮತ್ತು ಯೋಗ ಗುರು ಗಣೇಶ್ ಕುಮಾರ್ ಜನ್ಮದಿನದ ಅಂಗವಾಗಿ ಯೋಗ ಸ್ಪೋರ್ಟ್ಸ್ ಫೌಂಡೇಶನ್ ಈ ಸ್ಪರ್ಧೆಯನ್ನು ಆಯೋಜಿಸಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಗದಗ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. ಪುರುಷರು ಹಾಗೂ ಮಹಿಳೆಯರಿಗಾಗಿ ವಿವಿಧ ವಯೋಮಿತಿ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಸಂಜೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸ್ಪರ್ಧೆಯ ವಿಜೇತರು: ಬಾಲಕರು: 8 ವರ್ಷದ ಒಳಗಿನವರು: ರುಚಿತ್ (ಎಸ್‌ಜಿಎಸ್ ಸಂಸ್ಥೆ. ಅಂಕ: 86.5)–1, ನಿತಿನ್ (ಎಸ್‌ಜಿಎಸ್‌)–2, ಡಿ.ಎ. ಚಿರಂತ್ (ಮೈಸೂರು)–3. 15–20 ವರ್ಷ ಒಳಗಿನವರು: ವಿ.ಎಸ್. ಕವೀಶ್ (ಎಂ.ಎನ್. ಯೋಗ ಕೇಂದ್ರ. ಅಂಕ: 89)–1, ಕೆ. ವಿನಯ್ ಕುಮಾರ್ (ನಿಸರ್ಗ ಯೋಗ ಕೇಂದ್ರ)–2, ಅಭಿಷೇಕ್‌ ಹೆಗಡೆ ( ಕೆವೈಎಂ)–3.

ADVERTISEMENT

ಪುರುಷರು: 21- 30 ವರ್ಷ ಒಳಗಿನವರು: ಭರತ್ ಗೌಡ (ಕೆವೈಎಂ. ಅಂಕ: 91.5)–1, ಎಸ್‌. ಶರತ್ (ಎಸ್‌ಎನ್‌ಎಎಸ್‌, ನಂಜನಗೂಡು)–2, ಡಿ.ಎಂ. ಸಂದೇಶ (ಎಸ್‌ಎನ್‌ಎಎಸ್‌ )–3. 31ರಿಂದ 40 ವರ್ಷ ಒಳಗಿನವರು: ವಿನೋದ್ ರಾಜ್–1, ಸನೀಶ್–2, ಫರಾನ್–3; 50 ವರ್ಷ ಮೇಲ್ಪಟ್ಟವರು: ಬಿ.ಕೆ. ಅಶ್ವತ್ಥ ನಾರಾಯಣ ( ಪಿ.ಆರ್. ಸ್ಪೋರ್ಟ್ಸ್‌. ಅಂಕ– 85.5)–1, ರವಿ ಪ್ರಕಾಶ್ (ಬೆಂಗಳೂರು)–2, ಬಿ.ಜಿ. ವಿಜಯ್ ರಘುನಾಥ್ (ಉಮಯ್‌ ಯೋಗ ಶಾಲೆ)–3.

ಬಾಲಕಿಯರ ವಿಭಾಗ: ಹರ್ಷಾ (835 ಅಂಕ)–1, ಎಚ್‌.ಸಿ. ಸನ್ನಿಧಿ (ಗುರುಕುಲಂ ಕೇಂದ್ರ)–2, ಐ.ಎಚ್‌. ಸನ್ನಿಧಿ (ಗುರುಕುಲಂ ಕೇಂದ್ರ)–3; 15–20 ವರ್ಷ ಒಳಗಿನವರು: ಮಧುಶಾಲಿನಿ (ನಿಸರ್ಗ ಯೋಗ ಕೇಂದ್ರ. ಅಂಕ– 85.5) ಕೆ.ಎನ್. ಕಾವ್ಯಾ (ಶ್ರೀ ಗುರುಕುಲ)–2, ಆರ್. ಅಂಕಿತಾ ( ಎಂ.ವಿ. ಯೋಗ)–3.

ಮಹಿಳೆಯರು: 21–30 ವರ್ಷ ಒಳಗಿನವರು: ಎ. ಗಾನಶ್ರೀ (ನಿಸರ್ಗ ಯೋಗ ಕೇಂದ್ರ, ದೊಡ್ಡಬಳ್ಳಾಪುರ. ಅಂಕ– 86.5)–1, ಎಸ್. ದೀಪಾ (ಶ್ರೀ ಗುರುಕುಲ)–2, ಡಿ. ಸ್ಪಂದನಾ (ಎಸ್‌ಎನ್‌ಎಎಸ್)–3; 31–40 ವರ್ಷ ಒಳಗಿನವರು: ವೀಣಾ–1, ಸ್ಮಿತಾ–2, ಸ್ಪಂದನಾ–3; 50 ಮೇಲ್ಪಟ್ಟವರು: ಟಿ.ಜಿ. ಸರೋಜಾ (ಬೆಂಗಳೂರು)–1, ಶಶಿಬಾಲಾ ರಾಮಮೂರ್ತಿ (ಮೈಸೂರು ವಿ.ವಿ)–2, ಸುಬ್ಬಲಕ್ಷ್ಮಿ (ಮೈಸೂರು ಯೋಗಾಲಯ)–3.

ಯೋಗಭವನದಲ್ಲಿ ಭಾನುವಾರ ನಡೆದ ಮುಕ್ತ ಯೋಗಾಸನ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಯೋಗ ಪ್ರದರ್ಶನ ನೀಡಿದ ಪಟುಗಳು –ಪ್ರಜಾವಾಣಿ ಚಿತ್ರ

ಸ್ಪರ್ಧೆಗೆ ಚಾಲನೆ

ಬೆಳಿಗ್ಗೆ ಯೋಗ ಸ್ಪರ್ಧೆಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಯೋಗ ಫೆಡರೇಶನ್ ಆಫ್ ಮೈಸೂರಿನ ಅಧ್ಯಕ್ಷ ಶ್ರೀಹರಿ ಕಾರ್ಯದರ್ಶಿ ಶಶಿಕುಮಾರ್ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿ‌ನ‌ ಸ್ಥಾನಿಕ ವೈದ್ಯಾಧಿಕಾರಿ ಡಾ.ಎಚ್.ಎ. ಶಶಿರೇಖಾ ಯೋಗ ಗುರು ಗಣೇಶ್ ಕುಮಾರ್ ಮಂಡ್ಯ ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ. ಲೋಕೇಶ್ ಮೈಸೂರು ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕ ಸಿ.ವೆಂಕಟೇಶ ಮೈಸೂರು ಯೋಗ ಒಕ್ಕೂಟದ ಗೌರವ ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷ ಟಿ.ಜಲೇಂದ್ರ ಕುಮಾರ್ ಯೋಗ ಸ್ಪೋರ್ಟ್ಸ್ ಫೌಂಡೇಶನ್ ಖಜಾಂಚಿ ಎಂ.ಎನ್. ಮೋಹನ್ ಕರ್ನಾಟಕ ಸ್ಟೇಟ್ಸ್ ಅಮೆಚೂರ್ ಯೋಗ ಅಸೋಸಿಯೇಷನ್ ಉಪಾಧ್ಯಕ್ಷ ಗಿರೀಶ್ ಕಾರ್ಯದರ್ಶಿ ಎ.ನಟರಾಜು ಬಸವಮಾರ್ಗ ಸಂಸ್ಥೆಯ ಎಸ್.ರಾಜು ಯೋಗ ಗುರುಗಳಾದ ಗೀತಾ ಕುಮಾರ್ ಪ್ರೇಮ್ ಕುಮಾರ್ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.