ಮೈಸೂರು: ಅಷ್ಟಾಂಗ ಯೋಗ ಗುರು ಶರತ್ ಜೋಯಿಸ್ ( 53) ಹೃದಯಘಾತದಿಂದ ಅಮೆರಿಕಾದ ವರ್ಜೇನಿಯದಲ್ಲಿ ಮಂಗಳವಾರ ನಿಧನರಾದರು.
ಮೈಸೂರಿನ ಯೋಗಗುರು ಪಟ್ಟಾಭಿ ಜೋಯಿಸ್ ಅವರ ಮೊಮ್ಮಗನಾದ ಶರತ್ ಇಲ್ಲಿನ ಗೋಕುಲಂ ನಿವಾಸಿ ಆಗಿದ್ದು, ತಮ್ಮದೇ ಹೆಸರಿನ ಯೋಗ ಕೇಂದ್ರ ನಡೆಸುತ್ತಿದ್ದರು.
ದೇಶ-ವಿದೇಶಗಳಲ್ಲಿ ಯೋಗ ಹೇಳಿಕೊಡುತ್ತಿದ್ದರು. ಸದ್ಯ ವರ್ಜೇನಿಯದಲ್ಲಿ ನೆಲೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.