ADVERTISEMENT

ಯುಗಾದಿ ಸಮಬಾಳಿನ ಜೀವನದ ಹಬ್ಬ: ಶಾಸಕ ಹರೀಶ್ ಗೌಡ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2024, 7:58 IST
Last Updated 9 ಏಪ್ರಿಲ್ 2024, 7:58 IST
ಮೈಸೂರು ಯುವ ಬಳಗದಿಂದ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ಪ್ರಯುಕ್ತ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿಪ್ರ ಕುಟುಂಬದವರಿಗೆ ಶಾಸಕ ಹರೀಶ್ ಗೌಡ ಒಂಟಿಕೊಪ್ಪಲ್ ಪಂಚಾಂಗ ವಿತರಿಸಿ ಶುಭ ಕೋರಿದರು. ಎಚ್.ವಿ.ರಾಜೀವ್, ಇಳೈ ಆಳ್ವಾರ್ ಸ್ವಾಮೀಜಿ, ಕೃಷ್ಣಮೂರ್ತಿ ಭಾಗವಹಿಸಿದ್ದರು
ಮೈಸೂರು ಯುವ ಬಳಗದಿಂದ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ಪ್ರಯುಕ್ತ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿಪ್ರ ಕುಟುಂಬದವರಿಗೆ ಶಾಸಕ ಹರೀಶ್ ಗೌಡ ಒಂಟಿಕೊಪ್ಪಲ್ ಪಂಚಾಂಗ ವಿತರಿಸಿ ಶುಭ ಕೋರಿದರು. ಎಚ್.ವಿ.ರಾಜೀವ್, ಇಳೈ ಆಳ್ವಾರ್ ಸ್ವಾಮೀಜಿ, ಕೃಷ್ಣಮೂರ್ತಿ ಭಾಗವಹಿಸಿದ್ದರು   

ಮೈಸೂರು: ‘ಯುಗಾದಿ ವರ್ಷಾಚರಣೆಯು ಬೇವು ಬೆಲ್ಲ ಸಂಕೇತದ ಮೂಲಕ ಕಷ್ಟಸುಖಗಳ ಸಮಬಾಳಿನ ಜೀವನಕ್ಕೆ ನಮ್ಮನ್ನು ಸಿದ್ಧಗೊಳಿಸುತ್ತದೆ’ ಎಂದು ಶಾಸಕ ಹರೀಶ್ ಗೌಡ ತಿಳಿಸಿದರು.

ಮೈಸೂರು ಯುವ ಬಳಗದಿಂದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಹಬ್ಬದ ಪ್ರಯುಕ್ತ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿಪ್ರ ಕುಟುಂಬದವರಿಗೆ ಒಂಟಿಕೊಪ್ಪಲ್ ಪಂಚಾಂಗ ವಿತರಿಸಿ ಶುಭ ಕೋರಿ ಮಾತನಾಡಿದರು.

‘ಸೌರಮಂಡಲ ಆಧಾರಿತದ ಭೂಮಿಯಲ್ಲಿ ನಡೆಯುವ ಬದಲಾವಣೆಯನ್ನು ತಿಳಿಸುವುದೇ ಪಂಚಾಂಗ, ಜೀವನವನ್ನು ಸರಿಯಾಗಿ ನಡೆಸಬೇಕಾದರೆ ಪಂಚಾಂಗದ ನಿರ್ಧಾರ ಮುಖ್ಯ’ ಎಂದರು  

ADVERTISEMENT

ಕಾಂಗ್ರೆಸ್‌ ಮುಖಂಡ ಎಚ್.ವಿ.ರಾಜೀವ್ ಮಾತನಾಡಿ, ‘ಒಂಟಿಕೊಪ್ಪಲ್ ಪಂಚಾಂಗವು ದೇಶವಿದೇಶಗಳಲ್ಲಿ ಜನಪ್ರಿಯವಾಗಿರುವುದು ಮೈಸೂರಿನ ಹಿರಿಮೆಯನ್ನು ಹೆಚ್ಚಿಸಿದೆ, ಧಾರ್ಮಿಕ ಸಂಪ್ರದಾಯವನ್ನು ಪರಿಪಾಲಿಸುವವರು ಪಂಚಾಂಗದ ಮಾಹಿತಿಯನ್ನು ಪಡೆದುಕೊಳ್ಳಲು ಮುಂದಾಗಬೇಕು’ ಎಂದರು.

ಇಳೈ ಆಳ್ವಾರ್ ಸ್ವಾಮೀಜಿ, ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಮೈ.ಕಾ.ಕುಮಾರ್, ಮೈಸೂರು ಯುವ ಬಳಗದ ಸಂಚಾಲಕ ನವೀನ್, ರವಿಚಂದ್ರ, ನಂಜುಂಡಸ್ವಾಮಿ, ಹೇಮಂತ್, ವಿಜ್ಞೇಶ್ವರ ಭಟ್, ಸುದರ್ಶನ್, ಲೋಕೇಶ್, ಮಂಜುಳಾ, ಶಾಂತ, ಮಂಗಳಾ, ರಂಗನಾಥ್, ಪ್ರಶಾಂತ್, ಶ್ರೀಕಾಂತ್ ಕಶ್ಯಪ್, ಮಹೇಶ್ ಕುಮಾರ್, ಪ್ರೊ. ಶರ್ಮಾ, ಚಕ್ರಪಾಣಿ, ಶ್ರೀನಿವಾಸ್, ಮಿರ್ಲೆ ಪನಿಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.