ADVERTISEMENT

ಮಸ್ಕಿ: ಕಾಲು ಇಲ್ಲದಿದ್ದರೂ ಮಾದರಿ ಜೀವನ!

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 15:23 IST
Last Updated 30 ನವೆಂಬರ್ 2023, 15:23 IST
ಮಸ್ಕಿಯಲ್ಲಿ ಸ್ವಂತ ಆರಂಭಿಸಿದ ಮಿನಿಡಾಬಾದಲ್ಲಿ ಅಡಿಗೆ ಮಾಡುತ್ತಿರುವ ವಿಶೇಷ ಚೇತನ ಯಲ್ಲೋಜಿರಾವ್
ಮಸ್ಕಿಯಲ್ಲಿ ಸ್ವಂತ ಆರಂಭಿಸಿದ ಮಿನಿಡಾಬಾದಲ್ಲಿ ಅಡಿಗೆ ಮಾಡುತ್ತಿರುವ ವಿಶೇಷ ಚೇತನ ಯಲ್ಲೋಜಿರಾವ್   

ಮಸ್ಕಿ: ಛಲ ಇದ್ದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಪಟ್ಟಣದಲ್ಲಿ ಡಾಬಾ ನಡೆಸುತ್ತಿರುವ ಯಲ್ಲೋಜಿರಾವ್ ಮಾದರಿಯಾಗಿದ್ದಾರೆ.

ಎರಡೂ ಕಾಲುಗಳನ್ನು ಪೊಲಿಯೊದಿಂದ ಕಳೆದುಕೊಂಡಿರುವ ವಿಶೇಷ ಚೇತನ ಯಲ್ಲೋಜಿರಾವ್ ಮಿನಿ ಡಾಬಾ ಆರಂಭಿಸುವ ಮೂಲಕ ಕಳೆದೊಂದು ದಶಕದಿಂದ ಬದುಕು ಕಟ್ಟಿಕೊಂಡು ಕುಟುಂಬದ ಜೀವನ ಸಾಗಿಸುತ್ತಿದ್ದಾರೆ.

ಡಾಬಾಕ್ಕೆ ಬರುವ ಗ್ರಾಹಕರಿಗೆ ಮಾಂಸಹಾರಿ ಹಾಗೂ ಸಸ್ಯಹಾರಿ ತಿಂಡಿ ತಿನಿಸುಗಳನ್ನು ರುಚಿ ರುಚಿಯಾಗಿ ಮಾಡಿ ಉಣ ಬಡಿಸುವ ಮೂಲಕ ಗಮನ ಸೆಳೆಯುತ್ತಾರೆ. ವಿಕಲಚೇತನ ಕೋಠಾದಡಿಯಲ್ಲಿ ತ್ರಿಚಕ್ರ ವಾಹನ ಪಡೆದುಕೊಂಡಿರುವ ಯಲ್ಲೋಜಿ ಅದರ ಮೂಲಕವೇ ಕಿರಾಣಿ, ತರಕಾರಿ ತರಲು ಸ್ವತಃ ಹೋಗಿ ಬರುತ್ತಾರೆ. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಯಲ್ಲೋಜಿರಾವ್ ತಾಯಿಯ ಆಶ್ರಯದಲ್ಲಿ ಬೆಳೆದಿದ್ದಾರೆ. ಹತ್ತನೇ ತರಗತಿವರೆಗೆ ಓದು ಮುಗಿಸಿದ ಅವರು ಬಡ ಕುಟುಂಬದಿಂದ ಬಂದಿದ್ದಾನೆ. ಡಾಬಾದಿಂದಲೇ ಬರುವ ಆದಾಯದಿಂದ ತಾಯಿ ಹಾಗೂ ಪತ್ನಿಯನ್ನು ಸಾಕುವ ಜೊತೆಗೆ ನಾಲ್ಕಾರು ಯುವಕರಿಗೆ ಕೆಲಸ ಕೊಟ್ಟು ಮಾದರಿಯಾಗಿದ್ದಾರೆ.

ADVERTISEMENT
ಮಸ್ಕಿಯಲ್ಲಿ ಸ್ವಂತ ಆರಂಭಿಸಿದ ಮಿನಿಡಾಬಾದಲ್ಲಿ ಅಡಿಗೆ ಮಾಡುತ್ತಿರುವ ವಿಶೇಷ ಚೇತನ ಯಲ್ಲೋಜಿರಾವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.