ADVERTISEMENT

ಮಹಿಳೆಯರನ್ನು ಕೆಳಗೆ ಇಳಿಸಿದ ನಿರ್ವಾಹಕನ ಜತೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 12 ಜೂನ್ 2023, 14:15 IST
Last Updated 12 ಜೂನ್ 2023, 14:15 IST
   

ಕವಿತಾಳ (ರಾಯಚೂರು ಜಿಲ್ಲೆ): ಮಹಿಳಾ ಪ್ರಯಾಣಿಕರನ್ನು ಬಸ್‌ನಿಂದ ಕೆಳಗೆ ಇಳಿಸಿದ ನಿರ್ವಾಕನ ಜತೆ ಸಹ ಪ್ರಯಾಣಿಕರು ವಾಗ್ವಾದ ನಡೆಸಿದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.

ಕವಿತಾಳ ದಿಂದ ರಾಯಚೂರಿಗೆ ತೆರಳುಲು ಬೀಳಗಿ– ಹೈದರಾಬಾದ್ ಬಸ್ ನ್ನು ಹತ್ತಿದ್ದ 8-10 ಮಹಿಳೆಯರನ್ನು ನಿರ್ವಾಹಕ ಕೆಳಗೆ ಇಳಿಸಿದ ಹಿನ್ನೆಲೆಯಲ್ಲಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಅಂತರ ರಾಜ್ಯ ಸಂಚರಿಸುವ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ ಎಂದು ಬಸ್ ನಿಂದ ಮಹಿಳೆಯರನ್ನು ನಿರ್ವಾಹಕ ಕೆಳಗೆ ಇಳಿಸಿದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆಯರು ಉಚಿತ ಪ್ರಯಾಣ ಎಂದುಕೊಂಡು ಹಣವಿಲ್ಲದೆ ಬಂದಿದ್ದೇವೆ ಮತ್ತು ರಾಯಚೂರು ವರೆಗೆ ಮಾತ್ರ ತಾವು ಪ್ರಯಾಣಿಸುವುದು ಹೀಗಾಗಿ ಅವಕಾಶ ನೀಡುವಂತೆ ಒತ್ತಾಯಿಸಿದರು.

ADVERTISEMENT

ಅಂತರರಾಜ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದು ಸಾರಿಗೆ ಸಂಸ್ಥೆ ಮೊದಲೇ ಸ್ಪಷ್ಟ ಪಡಿಸಿದೆ. ಹೀಗಾಗಿ ಈ ಬಸ್‌ನಲ್ಲಿ ಉಚಿತ ಪ್ರವಾಸಕ್ಕೆ ಅವಕಾಶ ಇಲ್ಲ ಎಂದು ನೇರವಾಗಿಯೇ ಹೇಳಿದರು. ಇದರಿಂದ ಕೆಲವರು ಟಿಕೆಟ್ ಪಡೆದು ಪ್ರಯಾಣ ಮುಂದುವರೆಸಿದರು. ಹಣವಿಲ್ಲದ ಕೆಲವರು ಸರ್ಕಾರ ಮತ್ತು ನಿರ್ವಾಹಕನ ವಿರುದ್ಧ ಬೇಸರ ವ್ಯಕ್ತಪಡಿಸಿ ಬಸ್ ನಿಂದ ಕೆಳಗೆ ಇಳಿದರು.

‘ಮಹಿಳೆಯರನ್ನು ಅಮಾನವೀಯವಾಗಿ ಕೆಳಗೆ ಇಳಿಸಿದ ನಿರ್ವಾಹಕನ ವರ್ತನೆ ಸಹಸಲಾಗಲಿಲ್ಲ ಹೀಗಾಗಿ ವಾಗ್ವಾದ ನಡೆಯಿತು’ ಎಂದು ಪ್ರಯಾಣಿಕ ಗೋಪಾಳ ಬಳ್ಳಾರಿ ಹೇಳಿದರು.

ಮಹಿಳೆಯರು ಬಸ್‌ನಲ್ಲಿ ಏರುವ ಮೊದಲೇ ಅವರಿಗೆ ಅಂತರರಾಜ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದು ತಿಳಿಸಬೇಕು. ಇಲ್ಲದಿದ್ದರೆ ನಡು ರಸ್ತೆಯಲ್ಲೇ ಇಳಿಯಬೇಕಾಗುತ್ತದೆ ಎಂದು ಪ್ರಯಾಣಿಕರು ಆಡಿಕೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.