ADVERTISEMENT

ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿದ ಅಭಿನಂದನ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 12:55 IST
Last Updated 22 ಜುಲೈ 2023, 12:55 IST
ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಶ್ರೀಗಳಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಸ್ವೀಕರಿಸುತ್ತಿರುವ ಅಭಿನಂದನ ಸಂಸ್ಥೆಯ ಸಂಚಾಲಕ ರಾಮಣ್ಣ ಹಂಪರಗುಂದಿ
ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಶ್ರೀಗಳಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಸ್ವೀಕರಿಸುತ್ತಿರುವ ಅಭಿನಂದನ ಸಂಸ್ಥೆಯ ಸಂಚಾಲಕ ರಾಮಣ್ಣ ಹಂಪರಗುಂದಿ   

ಮಸ್ಕಿ: ಸಂಡೇ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಮೂಲಕ ಜನರ ಗಮನ ಸೆಳೆದ ಪಟ್ಟಣದ ಅಭಿನಂದನ ಸಂಸ್ಥೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಸೇರಿದೆ.

ಕೊಪ್ಪಳದಲ್ಲಿ ಈಚೆಗೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಂಸ್ಥೆಯ ಸಂಚಾಲಕ ರಾಮಣ್ಣ ಹಂಪರಗುಂದಿ ಅವರಿಗೆ ಇಂಡಿಯಾ ಬುಕ್ ಆಪ್ ರೆಕಾರ್ಡ್ ದಾಖಲೆಯ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರತಿ ಭಾನುವಾರ ಸರ್ಕಾರಿ ಶಾಲೆಗಳು, ಬಸ್ ನಿಲ್ದಾಣಗಳು, ಉದ್ಯಾನಗಳು, ದೇವಾಲಯಗಳು ಮತ್ತು ಮುಂತಾದ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಅಭಿನಂದನ ಸಂಸ್ಥೆ ಗುರುತಿಸಿಕೊಂಡಿತ್ತು.

ADVERTISEMENT

ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಇದುವರೆಗೆ 106 ಸಂಡೇ ಫಾರ್ ಸೋಶಿಯಲ್ ವರ್ಕ್ ಅಭಿಯಾನ ಕೈಗೊಂಡ ರಾಮಣ್ಣ ಹಂಪರಗುಂದಿ ಮತ್ತು ಅವರ ಪತ್ನಿ ಶೃತಿ ಹಂಪರಗುಂದಿ ತಂಡಕ್ಕೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಸೇರಿದ್ದಕ್ಕೆ ನನಗೆ ಸಂತಸ ತಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಮಣ್ಣ ಹಂಪರಗುಂದಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.