ADVERTISEMENT

‘ಸರ್ಕಾರದ ಆದೇಶದಂತೆ ಸಂವಿಧಾನ ಪೀಠಿಕೆ ಅಳವಡಿಸಿ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 16:10 IST
Last Updated 22 ನವೆಂಬರ್ 2024, 16:10 IST

ರಾಯಚೂರು: ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ, ಸಹಕಾರಿ ಸಂಘಗಳ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆ ಅಳವಡಿಸಲು ರಾಜ್ಯ ಸರ್ಕಾರ ಆದೇಶ ಮಾಡಿದರೂ ಹಲವೆಡೆ ಪಾಲನೆ ಮಾಡುತ್ತಿಲ್ಲ. ಸರ್ಕಾರ ಕಟ್ಟುನಟ್ಟಿನ ಆದೇಶ ನೀಡಬೇಕು ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪಕ ಸಂಗೊಳ್ಳಿ ಸೋಮಣ್ಣ ಒತ್ತಾಯಿಸಿದರು.

ಸರ್ಕಾರ ಅನೇಕ ಕಚೇರಿಗಳಿಗೆ ಸಂವಿಧಾನದ ಪೀಠಿಕೆಯ ಫಲಕ ನೀಡಲಾಗಿದೆ. ಯಾವುದೇ ಕಚೇರಿಗೆ ತಲುಪದಿದ್ದಲ್ಲಿ ₹2,600 ಪಾವತಿಸಿ ಖರೀದಿಸಬಹುದು. ಸರ್ಕಾರದ ಅಧಿಕೃತ ಆದೇಶದಂತೆ ನಮ್ಮ ಸಂಸ್ಥೆಯಿಂದ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಿಗೆ ಸಂವಿಧಾನ ಪೀಠಿಕೆ ತಲುಪಿಸಲಾಗುತ್ತಿದೆ. ಆಸಕ್ತರು ಸಂಸ್ಥೆಗೆ ಸಂಪರ್ಕಿಸಿ ಪಡೆಯಬಹುದು ಎಂದು ಮನವಿ ಮಾಡಿದರು.

ಸಂಸ್ಥೆಯ ಪದಾಧಿಕಾರಿ ಯಮುನಪ್ಪ ಗಿರಿಜಾಲಿ, ರಾಮಣ್ಣ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.