ರಾಯಚೂರು: ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ (ಎಐಐಎಂಎಸ್–ಏಮ್ಸ್) ಆಸ್ಪತ್ರೆಯೊಂದನ್ನು ರಾಯಚೂರಿನಲ್ಲಿ ಸ್ಥಾಪಿಸಬೇಕು ಎಂದು ಏಮ್ಸ್ ಹೋರಾಟ ಸಮಿತಿ ಆರಂಭಿಸಿರುವ ನಿರಂತರ ಧರಣಿ ಬುಧವಾರ 20ನೇ ದಿನಕ್ಕೆ ಕಾಲಿರಿಸಿದೆ.
ವಿವಿಧ ಸಂಘ–ಸಂಸ್ಥೆಗಳು, ರಾಜಕೀಯ ಪಕ್ಷಗಳು ಧರಣಿಯನ್ನು ಬೆಂಬಲಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಧರಣಿ ನಿರತರು ಹೇಳುತ್ತಿದ್ದಾರೆ.
ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯುವ ಕೆಲಸವನ್ನು ಜಿಲ್ಲೆಯ ರಾಜಕಾರಣಿಗಳೇ ಮಾಡುತ್ತಿಲ್ಲ. ಕನಿಷ್ಠಪಕ್ಷ ರಾಜ್ಯದಿಂದ ಪ್ರಸ್ತಾವನೆಯೊಂದನ್ನು ಕಳುಹಿಸುವ ಕೆಲಸವನ್ನು ಮುಖ್ಯಮಂತ್ರಿ ಮಾಡಬೇಕು. ಇದಕ್ಕಾಗಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂಬುದು ಪ್ರತಿಭಟನಾಕಾರರ ಬೇಡಿಕೆ.
ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ, ಸಂಚಾಲಕ ಅಶೋಕ ಕುಮಾರ್ ಜೈನ್, ಎಸ್ ಮಾರೆಪ್ಪ ವಕೀಲರು ,ಜಾನ್ ವೆಸ್ಲಿ, ವೆಂಕಟೇಶಾಚಾರಿ ,ಸುಲೋಚನಾ ಸಂಘ ,ಆನಂದ ಪಾಟೀಲ, ಕಾಮರಾಜ ಪಾಟೀಲ್, ಡಿಂಗ್ರಿ ನರಸಪ್ಪ, ಪ್ರಸಾದ್ ಭಂಡಾರಿ, ಬಸವರಾಜ ಮಿಮಿಕ್ರಿ ,ಅವಿನಾಶ್ ಠಾಕೂರ್, ಮಾರೆಪ್ಪ ಸ್ವಾಮಿ ,ಈಶ್ವರ, ನಿತೀಶ್ ಪಾಟೀಲ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.