ADVERTISEMENT

ರಾಯಚೂರಿಗೆ ‘ಏಮ್ಸ್’: ಕೇಂದ್ರ ಸರ್ಕಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 14:02 IST
Last Updated 16 ಜುಲೈ 2024, 14:02 IST
ರಾಯಚೂರಿಗೆ ‘ಏಮ್ಸ್’ ಆಸ್ಪತ್ರೆ ಗೆ ಆಗ್ರಹಿಸಿ ಏಮ್ಸ್ ಹೋರಾಟ ಸಮಿತಿ ಮಂಗಳವಾರ ಮಸ್ಕಿ ಪಟ್ಟಣದಲ್ಲಿ ತಹಶೀಲ್ದಾರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿತು
ರಾಯಚೂರಿಗೆ ‘ಏಮ್ಸ್’ ಆಸ್ಪತ್ರೆ ಗೆ ಆಗ್ರಹಿಸಿ ಏಮ್ಸ್ ಹೋರಾಟ ಸಮಿತಿ ಮಂಗಳವಾರ ಮಸ್ಕಿ ಪಟ್ಟಣದಲ್ಲಿ ತಹಶೀಲ್ದಾರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿತು   

ಮಸ್ಕಿ: ಕಲ್ಯಾಣ ಕರ್ನಾಟಕ ಭಾಗದ ರಾಯಚೂರಿಗೆ ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ‘ಏಮ್ಸ್’ ಘೋಷಣೆ ಮಾಡಬೇಕು ಎಂದು ಹೋರಾಟ ಸಮಿತಿ ಸಂಚಾಲಕ ಶಿವಪ್ರಸಾದ ಕ್ಯಾತನಟ್ಟಿ ಆಗ್ರಹಿಸಿದರು.

ರಾಯಚೂರಿನಲ್ಲಿ ಏಮ್ಸ್‌ಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ 800 ದಿನಕ್ಕೆ ಮುಟ್ಟಿದ ಹಿನ್ನೆಲೆ ಮಂಗಳವಾರ ಪಟ್ಟಣದಲ್ಲಿ ತಹಶೀಲ್ದಾರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ರಾಯಚೂರಿಗೆ ಏಮ್ಸ್ ಆಸ್ಪತ್ರೆ ಬಂದರೆ ಈ ಭಾಗಕ್ಕೆ ತುಂಬ ಅನುಕೂಲವಾಗಲಿದೆ. ಕೇಂದ್ರ ಸರ್ಕಾರ ಬರುವ ತನ್ನ ಬಜೆಟ್‌ನಲ್ಲಿ ಏಮ್ಸ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಶರಣಯ್ಯ ಸೊಪ್ಪಿಮಠ ಮಾತನಾಡಿ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಏಮ್ಸ್ ನೆನೆಗುದಿಗೆ ಬಿದ್ದಿದೆ. ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಪಕ್ಷಾತೀತವಾಗಿ ಎಲ್ಲರೂ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದರು.

ADVERTISEMENT

ದಯಾನಂದ ಜೋಗಿನ್, ಶಿವಕುಮಾರ್ ಎನ್.ಆದಯ್ಯಸ್ವಾಮಿ ಕ್ಯಾತನಟ್ಟಿ, ವೀರೇಶ ಹಿರೇಮಠ, ಲಕ್ಷ್ಮೀನಾರಾಯಣ ಶೆಟ್ಟಿ, ಅಮರೇಶ ಬ್ಯಾಳಿ, ಶಿವರಾಜ ಯಂಬಲದ, ಮೌನೇಶ ನಾಯಕ, ಎ.ಡಿ ಉದಗಟ್ಟಿ, ಬಿ.ಎಲ್. ಶೆಟ್ಟಿ. ಶಿವರಾಜ ಇತ್ಲಿ. ನಾಗರಾಜ ಕಂಬಾರ, ಯಮನೂರು ಕನ್ನಾರಿ, ವಿನೋದ ಹಳ್ಳಿ, ಸಿದ್ದು ಗುರೂಜಿ ಸೇರಿದಂತೆ ಇತರರು ಇದ್ದರು.

ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿಗೆ ಜಾಥಾ ನಡೆಸಲಾಯಿತು. ತಹಶೀಲ್ದಾರ್ ಸುಧಾ ಅರಮನೆ ಮನವಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.