ರಾಯಚೂರು: ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಸತ್ಯಾಗ್ರಹ ಗುರುವಾರ 910ನೇ ದಿನಕ್ಕೆ ಪದಾರ್ಪಣೆ ಮಾಡಿದೆ.
ರಾಜ್ಯ ಸರ್ಕಾರ, ಹೋರಾಟಗಾರರ ಹಾಗೂ ಜನಪ್ರತಿನಿಧಿಗಳ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಿ ಕೇಂದ್ರದ ಆರೋಗ್ಯ ಸಚಿವರನ್ನು ಭೇಟಿ ಮಾಡಿ ರಾಯಚೂರಿಗೆ ಏಮ್ಸ್ ನೀಡಬೇಕು ಎಂದು ಮನವರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾಕ್ಕೆ ಮನವಿ ಮಾಡಿದರೂ ರಾಯಚೂರಿಗೆ ಏಮ್ಸ್ ಆರೋಗ್ಯ ಮಂಜೂರು ಮಾಡಲು ಮಿನಮೇಷ ಮಾಡುತ್ತಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು
ಸತ್ಯಾಗ್ರಹದಲ್ಲಿ ಅಶೋಕಕುಮಾರ ಜೈನ್, ವೆಂಕಟರೆಡ್ಡಿ ದಿನ್ನಿ, ರಮೇಶ ಕಲ್ಲೂರಕರ್, ವೀರಭದ್ರಯ್ಯ ಸ್ವಾಮಿ, ವೆಂಕಟರೆಡ್ಡಿ ದಿನ್ನಿ , ಜಗದೀಶ ಪೂರ್ತಿಪಲಿ, ವೆಂಕಯ್ಯಶೆಟ್ಟಿ ಹೊಸಪೇಟೆ, ರಾಘವೇಂದ್ರ ಗೌಡ, ಸಂತೋಷ ಜೈನ್,ಶ್ರೀನಿವಾಸ ಆಚಾರ ಜೋಷಿ, ಅಜಿಜ, ದೇವೆಂದ್ರಪ್ಪ ಧನ್ವಂತರಿ, ಬೆಟ್ಟಪ್ಪ ವಕ್ರಾಣಿ, ಅಬ್ದುಲ ಗನಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.