ADVERTISEMENT

ರಾಯಚೂರಿನಲ್ಲಿ ಅಪ್ಪು ಅಂಗನವಾಡಿ ಕೇಂದ್ರ ಉದ್ಘಾಟನೆ: ಅಭಿಮಾನಿಗಳಿಗೆ ಅನ್ನಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 13:44 IST
Last Updated 13 ಮಾರ್ಚ್ 2022, 13:44 IST
ಅಪ್ಪು ಅಂಗನವಾಡಿ ಕೇಂದ್ರ
ಅಪ್ಪು ಅಂಗನವಾಡಿ ಕೇಂದ್ರ   

ರಾಯಚೂರು: ನಗರದ ತಿಮ್ಮಾಪುರ ಪೇಟೆಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರಕ್ಕೆ ‘ಅಪ್ಪು ಅಂಗನವಾಡಿ ಕೇಂದ್ರ’ ಎಂದು ನಾಮಕರಣ ಮಾಡಿದ್ದು, ಶಾಸಕ ಡಾ.ಶಿವರಾಜ ಪಾಟೀಲ ಭಾನುವಾರ ಉದ್ಘಾಟಿಸಿದರು.

ಆನಂತರ ಮಾತನಾಡಿದ ಅವರು, ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಿಗೂ ಅಪ್ಪು ಹೆಸರಿಡಲು ರಾಜ್ಯ ಸರ್ಕಾರಕ್ಕೆ ಕೋರಲಾಗುವುದು ಎಂದರು.

ನಗರದ ಗಾಂಧಿಚೌಕ್‌ ಹನುಮಾನ ದೇವಸ್ಥಾನ ಅರ್ಚಕ ಪವನ ಆಚಾರ್‌ ಅವರ ಮೂಲಕ ವೇದಿಕೆಯಿಂದ ಚಿತ್ರನಟ ಶಿವರಾಜಕುಮಾರ್‌ ಅವರಿಗೆ ವಿಡಿಯೊಕಾಲ್‌ ಮಾಡಿ ಕಾರ್ಯಕ್ರಮದ ವಿವರ ತಿಳಿಸಲಾಯಿತು.

‘ಅಪ್ಪು ಹೆಸರಿನಲ್ಲಿ ರಾಯಚೂರು ಜಿಲ್ಲೆಯ ಕಲಾವಿದರಿಗೆ ಪ್ರತಿವರ್ಷ ₹1 ಲಕ್ಷ ಮೊತ್ತದ ಪ್ರಶಸ್ತಿ ನೀಡುವುದಾಗಿ ಈ ಮೊದಲೇ ಘೋಷಿಸಿದ್ದೇನೆ. ಮೊದಲ ಕಾರ್ಯಕ್ರಮಕ್ಕೆ ತಾವು ಬರಬೇಕು’ ಎಂದು ಶಾಸಕರು ಇದೇ ವೇಳೆ ಆಹ್ವಾನಿಸಿದರು.

ಖಂಡಿತ ಬರುವುದಾಗಿ ನಟ ಶಿವರಾಜಕುಮಾರ್‌ ಒಪ್ಪಿಗೆ ಸೂಚಿಸಿದರು. ಎಲ್ಲರಿಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಾರ್ಡ್‌ ಸಂಖ್ಯೆ 16 ರ ಸದಸ್ಯೆ ಗಾಯತ್ರಿ ಹರೀಶ್‌ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.