ADVERTISEMENT

ಸಿಂಧನೂರು | ಮರಗಳ ಕಡಿಯಲು ಮುಂದಾದರೆ ಅಪ್ಪಿಕೋ ಚಳವಳಿ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 15:18 IST
Last Updated 11 ಸೆಪ್ಟೆಂಬರ್ 2024, 15:18 IST
ಸಿಂಧನೂರಿನ ಪೊಲೀಸ್ ವಸತಿ ಗೃಹಗಳ ಆವರಣದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸುವ ಸಲುವಾಗಿ ಕಡಿಯಲು ಉದ್ದೇಶಿಸಿರುವ ಮರ
ಸಿಂಧನೂರಿನ ಪೊಲೀಸ್ ವಸತಿ ಗೃಹಗಳ ಆವರಣದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸುವ ಸಲುವಾಗಿ ಕಡಿಯಲು ಉದ್ದೇಶಿಸಿರುವ ಮರ   

ಸಿಂಧನೂರು: ನಗರದ ಪೊಲೀಸ್ ಇಲಾಖೆಯ ವಸತಿ ಗೃಹಗಳ ಆವರಣದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸುವ ಸಲುವಾಗಿ ಸುಮಾರು 30 ವರ್ಷಗಳ 14 ಮರಗಳನ್ನು ಕಡಿಯಲು ಗುತ್ತಿಗೆದಾರು, ಅರಣ್ಯ ಅಧಿಕಾರಿಗಳು ಮುಂದಾಗಿರುವುದು ಖಂಡನೀಯ. ಇದನ್ನು ಕೈಬಿಡದಿದ್ದರೆ ಅಪ್ಪಿಕೋ ಚಳುವಳಿ ನಡೆಸಲಾಗುವುದು ಎಂದು ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪೂರ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಹೇಳಿಕೆ ನೀಡಿರುವ ಅವರು, ‘ಮರಗಳನ್ನು ಕಡಿಯುವ ಯಾವುದೇ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ 1 ಮರಕ್ಕೆ 21 ಗಿಡಗಳನ್ನು ನೆಟ್ಟು 3 ವರ್ಷಗಳವರೆಗೆ ಪೋಷಣೆ ಮಾಡುವಂತೆ ಮುಚ್ಚಳಿಕೆ ಪತ್ರ ಬರೆದು ಕೊಟ್ಟರೆ ಮಾತ್ರ ಅನುಮತಿ ನೀಡಬೇಕು. ಇಲ್ಲದಿದ್ದರೆ ಮರಗಳ ಕಡಿಯುವಾಗ ಎಲ್ಲ ಪರಿಸರ ಪ್ರೇಮಿಗಳು ಸೇರಿ ಮರಗಳನ್ನು ಅಪ್ಪಿಕೊಂಡು ಚಳುವಳಿ ನಡೆಸುತ್ತೇವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT