ADVERTISEMENT

ಶಕ್ತಿನಗರ | ಎಲ್ಲೆಲ್ಲೂ ಬೂದಿ: ಜನರಿಗೆ ನಿತ್ಯ ಸಂಕಟ

ಉಮಾಪತಿ ಬಿ.ರಾಮೋಜಿ
Published 19 ಜುಲೈ 2024, 5:30 IST
Last Updated 19 ಜುಲೈ 2024, 5:30 IST
ಶಕ್ತಿನಗರ ಬಳಿಯ ಡಿ.ಯದ್ಲಾಪುರ ಗ್ರಾಮದ ಮನೆಯ ಮೆಟ್ಟಿಲುಗಳ ಮೇಲೆ ಬಿದ್ದಿರುವ ಹಾರುಬೂದಿ.
ಶಕ್ತಿನಗರ ಬಳಿಯ ಡಿ.ಯದ್ಲಾಪುರ ಗ್ರಾಮದ ಮನೆಯ ಮೆಟ್ಟಿಲುಗಳ ಮೇಲೆ ಬಿದ್ದಿರುವ ಹಾರುಬೂದಿ.   

ಶಕ್ತಿನಗರ: ಆರ್‌ಟಿಪಿಎಸ್ ವಿದ್ಯುತ್ ಘಟಕಗಳಿಂದ ಹೊರ ಬರುವ ಹಾರುಬೂದಿ ಪ್ರತಿನಿತ್ಯ ಸಮಸ್ಯೆ ತಂದೊಡ್ಡಿದ್ದು, ದೇವಸೂಗೂರು ಹೋಬಳಿ ಮಟ್ಟದ ವ್ಯಾಪ್ತಿಗಳಲ್ಲಿ ಬರುವ ಹಳ್ಳಿಗಳ ಜನರಿಗೆ ನರಕ ನಿರ್ಮಿಸಿದೆ.

ವಿದ್ಯುತ್ ಘಟಕಗಳ ನಿರ್ಮಾಣಕ್ಕಾಗಿ ಡಿ.ಯದ್ಲಾಪುರ, ದೇವಸೂಗೂರು ಸೇರಿದಂತೆ ಸುತ್ತಲಿನ ಕೆಲ ಗ್ರಾಮಗಳ ಜನರು ಭೂಮಿ ನೀಡಿದ್ದಾರೆ. ಈಗ ಹಾರುಬೂದಿ ಸಮಸ್ಯೆಗೆ ಸುತ್ತಲಿನ ಗ್ರಾಮಸ್ಥರು ನಲುಗಿ ಹೋಗಿದ್ದಾರೆ. ಪ್ರತಿ ಮನೆ ಮನೆಗಳ ಮೇಲೆ ಹಾರುಬೂದಿ ಬೀಳುತ್ತಿದೆ. ಅಡುಗೆ ಮಾಡುವ ಸಾಮಾಗ್ರಿಗಳ ಮೇಲೆ, ವಾಹನಗಳ ಮೇಲೆ ಬೀಳುವುದರ ಜೊತೆಗೆ , ನಿಂತಲ್ಲೇ ನಿಂತು ಕೊಂಡಲ್ಲಿ ನಿಮ್ಮ ತಲೆಯ ಮೇಲೂ ಬೂದಿ ಬಿದ್ದು , ಕಪ್ಪು ಕೂದಲು ಬಿಳಿ ಕೂದಲು ಆಗುತ್ತದೆ. ನಿತ್ಯ ಕಷ್ಟ ಅನುಭವಸುತ್ತಿರುವ ಜನರು ಪಾಡು ಹೇಳ ತೀರದಂತಾಗಿದೆ.

ಆರ್‌ಟಿಪಿಎಸ್ ಎಂಟು ಘಟಕಗಳಿಂದ ಪೂರ್ಣ ಪ್ರಮಾಣದ ವಿದ್ಯುತ್‌ ಉತ್ಪಾದನೆಯಾದಲ್ಲಿ 25ಸಾವಿರ ಮೆಟ್ರಿಕ್ ಟನ್ ಅಧಿಕ ಕಲ್ಲಿದ್ದಲು ಉರಿಯುತ್ತದೆ. ಇದರಿಂದ ಶೇಕಡಾ 25 ರಷ್ಟು ಹಸಿ ಬೂದಿ ಉತ್ಪಾದನೆಯಾದರೆ, ಇನ್ನೂಳಿದ ಶೇ.75ರಷ್ಟು ಹಾರುಬೂದಿ. ಬೂದಿಯನ್ನು ಸಿಮೆಂಟ್ ಕಾರ್ಖಾನೆಗಳು ಖರೀದಿಸುತ್ತಿದ್ದು, ಲಾರಿಗಳು, ಟಿಪ್ಪರ್‌ಗಳು, ಟ್ಯಾಂಕರ್‌ಗಳ ಮೂಲಕ ಸಾಗಿಸಲಾಗುತ್ತಿದೆ.

ADVERTISEMENT

ವಾಹನಗಳಿಂದ ಸಾಗಣೆ ಮಾಡುವ ಬೂದಿ ರಸ್ತೆಯಲ್ಲಿ ಬೀಳುತ್ತಿದೆ. ರಸ್ತೆ ಮೇಲೆ ಬಿದ್ದ ಬೂದಿ ಬೈಕ್ ಸವಾರಗಳ ಕಣ್ಣಿಗೆ ಬಿದ್ದು ಅಪಘಾತ ಉಂಟಾಗಿ ಬೈಕ್ ಸವಾರರು ಮೃತಪಟ್ಟಿರುವ ಘಟನೆಗಳು ನಡೆದಿವೆ. ಇನ್ನೂ ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಲ್ಲಿ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಭಾಗದ ಜನರಿಗೆ ಅಸ್ತಮಾ, ಕ್ಯಾನ್ಸರ್, ಉಸಿರಾಟ ತೊಂದರೆ ಕಾಯಿಲೆಗಳು ಹೆಚ್ಚಾಗುತ್ತಿವೆ. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದೆ. ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಶಕ್ತಿನಗರ ಬಳಿಯ ಡಿ.ಯದ್ಲಾಪುರ ಗ್ರಾಮದ ಮನೆಯ ಮೆಟ್ಟಿಲುಗಳ ಮೇಲೆ ಬಿದ್ದಿರುವ ಹಾರುಬೂದಿ.
ಆರ್‌ಟಿಪಿಎಸ್ ವಿದ್ಯುತ್ ಘಟಕಗಳಿಂದ ಹೊರ ಬರುವ ಹಾರುಬೂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.