ADVERTISEMENT

ರಾಯಚೂರು | ‘ಹೃದಯಾಘಾತ ತಡೆಗೆ ಜಾಗೃತಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 16:21 IST
Last Updated 7 ಜುಲೈ 2024, 16:21 IST
ರಾಯಚೂರಿನ ನ್ಯೂ ಅಮೃತಾ ಆಸ್ಪತ್ರೆಯ ಸಂಭಾಂಗಣದಲ್ಲಿ ಭಾನುವಾರ ನಡೆದ ‘ಹೃದಯಘಾತ ತಡೆ’ ವಿಧಾನ ಕುರಿತ ತರಬೇತಿ ಶಿಬಿರದಲ್ಲಿ ಎಸ್ ಕೆಇಎಸ್ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಬಾಬುರಾವ್ ಶೇಗುಣಸಿ ಮಾತನಾಡಿದರು
ರಾಯಚೂರಿನ ನ್ಯೂ ಅಮೃತಾ ಆಸ್ಪತ್ರೆಯ ಸಂಭಾಂಗಣದಲ್ಲಿ ಭಾನುವಾರ ನಡೆದ ‘ಹೃದಯಘಾತ ತಡೆ’ ವಿಧಾನ ಕುರಿತ ತರಬೇತಿ ಶಿಬಿರದಲ್ಲಿ ಎಸ್ ಕೆಇಎಸ್ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಬಾಬುರಾವ್ ಶೇಗುಣಸಿ ಮಾತನಾಡಿದರು   

ರಾಯಚೂರು: ನಗರದ ನ್ಯೂ ಅಮೃತಾ ಆಸ್ಪತ್ರೆಯ ಸಭಾಂಗಣದಲ್ಲಿ ಭಾನುವಾರ ಭಾರತೀಯ ಮಕ್ಕಳ ಸಂಘ, ಅಮೃತ ಆಸ್ಪತ್ರೆ, ಬೆಂಗಳೂರಿನ ಪರೀಕ್ಷಾ ಪೂರ್ವ ಕೇಂದ್ರ ಹಾಗೂ ಎಸ್.ಕೆ.ಇ. ಪ್ಯಾರಾಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ‘ಹೃದಯಘಾತ ತಡೆ’ ವಿಧಾನ ಕುರಿತ ತರಬೇತಿ ಶಿಬಿರ ನಡೆಯಿತು.  

ಕಾರ್ಯಕ್ರಮದಲ್ಲಿ ಡಾ.ಪ್ರಣವ್ ಮಾತನಾಡಿ, ‘ಇಂದಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ಇದಕ್ಕೆ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೊಂದಿರುವ ನಿಷ್ಕಾಳಜಿಯೇ ಕಾರಣ’ ಎಂದು ತಿಳಿಸಿದರು.

ಎಸ್‌ಕೆಇಎಸ್ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಬಾಬುರಾವ್ ಶೇಗುಣಸಿ, ಡಾ.ಮಲ್ಲೇಶಗೌಡ ಮಾತನಾಡಿದರು.

ADVERTISEMENT

 ಡಾ.ಉಷಾ, ಡಾ.ಮಲ್ಲೇಶಪ್ಪ, ಡಾ.ಅಜಯ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.