ADVERTISEMENT

ಹಟ್ಟಿಚಿನ್ನದಗಣಿ | ನೀರು ಬಿಡುಗಡೆ: ನದಿ ತಟದ ಗ್ರಾಮಗಳ ಜನರಿಗೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 14:17 IST
Last Updated 21 ಜುಲೈ 2024, 14:17 IST
ಹಟ್ಟಿ ಸಮೀಪದ ಗದ್ದಿಗಿ ತಾಂಡಾದ ಬಳಿಯ ಕೃಷ್ಣಾ ನದಿ ತಟಕ್ಕೆ ತಹಶೀಲ್ದಾರ್ ಶಂಶಾಲಂ ಭೇಟಿ ನೀಡಿದರು
ಹಟ್ಟಿ ಸಮೀಪದ ಗದ್ದಿಗಿ ತಾಂಡಾದ ಬಳಿಯ ಕೃಷ್ಣಾ ನದಿ ತಟಕ್ಕೆ ತಹಶೀಲ್ದಾರ್ ಶಂಶಾಲಂ ಭೇಟಿ ನೀಡಿದರು   

ಹಟ್ಟಿಚಿನ್ನದಗಣಿ: ‘ಕೃಷ್ಣಾ ನದಿ ತಟದ ಗ್ರಾಮಗಳ ಗ್ರಾಮಸ್ಥರು ನದಿಗೆ ಇಳಿಯಬಾರದು’ ತಹಶೀಲ್ದಾರ್ ಶಂಶಾಲಂ ತಿಳಿಸಿದ್ದಾರೆ.

ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ನದಿ ಪಾತ್ರದ ಗ್ರಾಮ ಹಾಗೂ ದೊಡ್ಡಿಗಳು ಪ್ರವಾಹ ಪರಿಸ್ಥಿತಿಗೆ ಒಳಗಾಗುವ ಸಾಧ್ಯತೆ ಇರುವುದರಿಂದ ತಾಲ್ಲೂಕಾಡಳಿತ ನದಿ ತಟದ ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿದೆ.

ತಹಶೀಲ್ದಾರ್ ಶಂಶಾಲಂ ನೇತೃತ್ವದ ತಂಡ ಟಣಮಕಲ್ಲು, ಗದ್ದಿಗಿ ತಾಂಡಾಕ್ಕೆ ಭೇಟಿ ನೀಡಿತು. ಕೃಷ್ಣಾ ನದಿಗೆ 1.10 ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಎದುರಾಗಬಹುದು. ಸಾರ್ವಜನಿಕರು ನದಿಗೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಸೂಚನೆ ನೀಡಿದರು.

ಉಪ ತಹಶೀಲ್ದಾರ್ ರಂಗಪ್ಪ ನಾಯಕ ದೊರೆ, ಕಂದಾಯ ಇಲಾಖೆ ಅಧಿಕಾರಿಗಳಾದ ಅಮರೇಶ ಮಲ್ಲಿಕಾರ್ಜುನ ಕಟ್ಟಿಮನಿ, ಮಲ್ಲಿಕಾರ್ಜುನ ಕ್ಯಾತನಾಳ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.